LIC ವಿಭಾಗ ಮಟ್ಟದ 33ನೇ ವಾರ್ಷಿಕ ಸಾಮಾನ್ಯ ಸಭೆ.

ಜಮಖಂಡಿ : ಇಂದು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವಿಭಾಗ ಮಟ್ಟದ 33ನೇ ವಾರ್ಷಿಕ ಸಾಮಾನ್ಯ ಸಭೆ ದಿ.22 ಭಾನುವಾರ ನಗರದ ಕಲೂತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪದ್ಮರಾಜ ತಡಸದ ತಿಳಿಸಿದರು.

ನಗರದ ಅನ್ನಪೂರರ್ಣೆಶ್ವರಿ ಹೊಟೇಲ್‌ ಸಭಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶಾದ್ಯಂತ 15 ಲಕ್ಷ ಪ್ರತಿನಿಧಿಗಳಿದ್ದಾರೆ, 1964 ಸಂಸ್ಥೆ ಪ್ರಾರಂಭವಾಗಿದೆ. ಶಾಖೆ, ವಿಭಾಗ, ವಲಯ, ಕೇಂದ್ರ ಹೀಗೆ ನಾಲ್ಕು ವಿಭಾಗಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು ಜೀವ ವಿಮಾ ನಿಗಮ ಹಾಗೂ ಪಾಲಸಿದಾರರ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ದಕ್ಷಿಣ ವಲಯದ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಕಂದಕೂರ, ಬೆಳಗಾವ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್‌.ಎ.ಅಲ್ಲಾಭಾಷಾ, ಮಾರ್ಕೇಟಿಂಗ್‌ ಮ್ಯಾನೇಜರ ಸಿ.ಪಿ.ಹರಿನಾಥ, ಧಾರವಾಡದ ಶಾಖಾ ವ್ಯವಸ್ಥಾಪಕ ವಿವೇಕಾನಂದ.ಎಸ್‌.ಬೆಳಗಾವಿ ವಿಭಾಗದ ಸಂಸ್ಥಾಪಕ ಸದಸ್ಯ ಅರವಿಂದರಾವ ದೇಶಪಾಂಡೆ, ಇಸಿ ಸದಸ್ಯ ಪುಂಡಲೀಕ ಪವಾಸೆ, ಉಪಾಧ್ಯಕ್ಷ ರಾಜು ಪಾಟೀಲ, ವಲಯ ಇಸಿ ಸದಸ್ಯ ಭರತೇಶ ಕಲಗೌಡರ, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಘದ ಹೋರಾಟದ ಫಲವಾಗಿ ಪಾಲಸಿದಾರರಿಗೆ ಜಿಎಸ್‌ಟಿ ಬೀಳುವದನ್ನು ತಡೆಯಲಾಗಿದೆ. ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಸಾಲ ಸೌಲಭ್ಯ, ಮಹಿಳೆಯರಿಗಾಗಿ ವಿಮಾಸಖಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ 10 ಸಾವಿರ ಪುರಸ್ಕಾರ ಮುಂತಾದ ಯೋಜನೆಗಳು ಜಾರಿಯಾಗಿವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಸ್ವಾಮ್ಯತೆ ಉಳ್ಳ ಏಕೈಕ ಜೀವ ವಿಮಾ ಕಂಪನಿಯಾಗಿದ್ದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.

ಎಲ್‌ಐಸಿ 5000 ಶಾಖೆಗಳು, ಈ ಪೈಕಿ 2800 ಸ್ವಂತ ಕಚೇರಿಗಳಿವೆ. ದೇಶದಲ್ಲಿ ಸರ್ಕಾರದ ದೊಡ್ಡ ಪ್ರೊಜೆಕ್ಟಗಳಿಗೆ ಸಾಲ ಸೌಲಭ್ಯ ಒದಗಿಸುತ್ತಿದೆ. 2025 ಜನೇವರಿ ತಿಂಗಳಲ್ಲಿ ಒಂದೇ ದಿನದಲ್ಲಿ 5,88,107 ಪಾಲಸಿಗಳನ್ನು ಮಾಡುವ ಮೂಲಕ ಗಿನ್ನಿಸ್‌ ದಾಖಲೆ ಮಾಡಿದ ವಿಶ್ವದ ಏಕೈಕ ಸಂಸ್ಥೆಯಾಗಿದೆ. ಒಟ್ಟು 51 ಲಕ್ಷಕೋಟಿ ಆಸ್ತಿ ಹೊಂದಿದೆ ಎಂದು ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಅಶೋಕ ವಸ್ತ್ರದ, ರುದ್ರಪ್ಪ ಗೋಕಾಕ, ಆನಂದ ಹೊಸಕೋಟೆ ಅಶೋಕ ವಜ್ರಮಟ್ಟಿ, ರಮೇಶ್ ಜಾಲಿಕಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ತಾಲುಕು ಪ್ರತಿನಿಧಿಗಳು ಇದ್ದರು.

Recent Articles

spot_img

Related Stories

Share via
Copy link