ಜಮಖಂಡಿ 23: ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ರವಿ ಹಂಜ ಅವರ ಬಸವ ಮಂಟಪ ಕೃತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಮಖಂಡಿ ತಾಲ್ಲೂಕು ಘಟಕ ತೀವ್ರವಾಗಿ ಖಂಡಿಸಿದೆ.
ನ. 22ರಂದು ನಡೆದ ತಾಲ್ಲೂಕು ನಿರ್ದೇಶಕ ಮಂಡಳಿ ಸಭೆಯಲ್ಲಿ ಕೃತಿಯ ಲೇಖಕರ ವಿರುದ್ಧ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸರ್ವಾನುಮತದಿಂದ ಒತ್ತಾಯಿಸಲಾಯಿತು.
ಸಭೆಯಲ್ಲಿ ಮಹಾಸಭೆಯ ಉಪಾಧ್ಯಕ್ಷ ಆನಂದ ಗೂಂದಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಇಂಡಿ, ಕೋಶಾಧ್ಯಕ್ಷ ಸಿದ್ಧರಾಮ ಕೋಟ್ಯಾಳ, ಪ್ರಧಾನ ಕಾರ್ಯದರ್ಶಿ ಡಾ. ಮೃತ್ಯುಂಜಯ ಗವಿಮಠ, ನಿರ್ದೇಶಕರಾದ ಪಂಚಾಕ್ಷರಿ ಗೆನ್ನೂರಮಠ, ಮಲ್ಲಿಕಾರ್ಜುನ ಹೋಳಗಿ, ರುದ್ರಗೌಡ ಪಾಟೀಲ, ಭೀಮೇಶ ಬಾಳಪ್ಪಗೊಳ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶಿವಾನಂದ ಚನ್ನಯ್ಯ ಪೂಜಾರಿ




