ಕಾವ್ಯಶ್ರೀ ಎಂಟ್ರಿಯಿಂದ ಸಾನ್ಯ- ರೂಪೇಶ್ ಶೆಟ್ಟಿ ದೂರ ದೂರ

ಕಿರುತೆರೆಯ ಬಿಗ್ ಬಾಸ್ ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೂ ಓಟಿಟಿಯಲ್ಲಿ ಮೋಡಿ ಮಾಡಿದ್ದ ಜೋಡಿ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಈಗ ಟಿವಿ ಬಿಗ್ ಬಾಸ್‌ನಲ್ಲಿ ನಾನೊಂದು ತೀರಾ ನೀನೊಂದು ತೀರಾ ಎನ್ನುತ್ತಿದ್ದಾರೆ. ರೂಪೇಶ್ (Roopesh) ಜೊತೆಗಿನ ಕಾವ್ಯಶ್ರೀ (Kavyashree) ಫ್ರೆಂಡ್‌ಶಿಪ್ ನೋಡಿ ಸಾನ್ಯ ಗರಂ ಆಗಿದ್ದಾರೆ.

ಟಿವಿ ಬಿಗ್ ಬಾಸ್‌ನಲ್ಲಿ ಹೊಸಬರ ಜೊತೆ ಹಳೆಯ ಸ್ಪರ್ಧಿಗಳ ಜುಗಲ್‌ಬಂದಿಯನ್ನ ಈ ಸೀಸನ್‌ನಲ್ಲಿ ನೋಡಬಹುದಾಗಿದೆ. ಓಟಿಟಿಯಲ್ಲಿ ಹೈಲೈಟ್ ಆಗಿದ್ದ ರೂಪೇಶ್ (Roopesh)  ಮತ್ತು ಸಾನ್ಯ (Sanya Iyer) ಇದೀಗ ಪ್ರವೀಣರ ಸ್ಥಾನದಲ್ಲಿದ್ದು, ನವೀನರ ಜೊತೆ ಒಂದು ತಂಡವಾಗಿ ಆಡಬೇಕಿದೆ. ಸಾನ್ಯ ಮತ್ತು ನಟಿ ಮಯೂರಿ ಒಂದು ತಂಡವಾಗಿದ್ದರೆ, ರೂಪೇಶ್ ಮತ್ತು ಕಾವ್ಯಶ್ರೀ ಗೌಡ ಮತ್ತೊಂದು ತಂಡವಾಗಿ ಆಟವಾಡುತ್ತಿದ್ದಾರೆ. ರೂಪೇಶ್ ಮತ್ತು ಕಾವ್ಯಶ್ರೀ ಒಡನಾಟ ಅದ್ಯಾಕೋ ಸಾನ್ಯಗೆ ಬಿಡಿಸಲಾಗದ ಕಂಗ್ಗಟಾಗಿದೆ.

ಬಿಗ್ ಬಾಸ್(Bigg Boss)  ಮನೆಯಲ್ಲಿ ಅಷ್ಟು ಸ್ಪರ್ಧಿಗಳು ಒಂದು ತಂಡವಾಗಿ ಆಡುತ್ತಿದ್ದಾರೆ. ಅದರಂತೆಯೇ ಸಾನ್ಯ ಮತ್ತು ರೂಪೇಶ್ ಹೊಸಬರ ಜತೆ ತಂಡವಾಗಿ ಆಡಬೇಕಿದೆ. ಕಾವ್ಯಶ್ರೀ ಗೌಡ, ರೂಪೇಶ್‌ಗೆ ಜೋಡಿಯಾದ ಮೇಲೆ ಸಾನ್ಯಗೆ ಒಂಟಿತನ ಕಾಡುತ್ತಿದೆ. ಕಾವ್ಯ ಎಂಟ್ರಿಯಿಂದ ಸಾನ್ಯ ಮತ್ತು ರೂಪೇಶ್ ದೂರವಾಗಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಸಮಯ ನೀಡಲಾಗುತ್ತಿಲ್ಲ. ನಮ್ಮಿಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲೇ ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆ. ನನಗೆ ಸಾನ್ಯ ಶೆಟ್ಟಿ ಅಂತಾ ಕರೆದರೆ ಇಷ್ಟ ಎಂದು ಈ ಹಿಂದೆ ಹೇಳಿದ್ದರು. ಮುಂದಿನ ದಿನಗಳಲ್ಲಿ ಸಾನ್ಯ, ರೂಪೇಶ್ ಸ್ನೇಹ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನ ಕಾದುನೋಡಬೇಕಿದೆ.

Recent Articles

spot_img

Related Stories

Share via
Copy link