ಬೆಂಗಳೂರು: ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆ ಕೇಂದ್ರ ಸರ್ಕಾರ (Central Government) ಐದು ವರ್ಷಗಳಿಗೆ ಪಿಎಫ್‍ಐ (PFI) ಸಂಘಟನೆಯನ್ನು ದೇಶಾದ್ಯಂತ ನಿಷೇಧ ಮಾಡಿದೆ. ಇದೀಗ 5 ವರ್ಷಗಳ ನಿಷೇಧದ ಬಳಿಕ ಸರ್ಕಾರ ಮುಂದೇನು ಮಾಡುತ್ತೆ ಎಂಬ ಪ್ರಶ್ನೆ ಎದ್ದಿದೆ.

ಪಿಎಫ್‍ಐ ಸಂಘಟನೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿತ್ತು. ಜೊತೆಗೆ ಈ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಕೇಂದ್ರಕ್ಕೆ ರಾಜ್ಯ ಸರ್ಕಾರಗಳು ಮನವಿಯನ್ನು ಸಲ್ಲಿಸಿತ್ತು. ಇದೀಗ ಪಿಎಫ್‍ಐ ಸಂಘಟನೆ ಮುಂದಿನ 5 ವರ್ಷ ಬ್ಯಾನ್ ಆಗಿದೆ.

ಮುಂದೇನು ಮಾಡುತ್ತೆ ಸರ್ಕಾರ?
ಪಿಎಫ್‍ಐ ಮತ್ತು ಅದರ ಸಹ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗುತ್ತದೆ. ಎನ್‍ಐಎ (NIA) ಮತ್ತು ಇಡಿಯಿಂದ (ED) ವಿಸ್ತೃತ ತನಿಖೆ ನಡೆಯಲಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಿಎಫ್‍ಐ ಪಾತ್ರದ ಬಗ್ಗೆ ತನಿಖೆ ನಡೆಸಲಿದೆ. ಪಿಎಫ್‍ಐ ಖಾತೆಗೆ ವರ್ಗಾವಣೆಯಾಗುತ್ತಿರುವ ಅಕ್ರಮದ ಬಗ್ಗೆ ಇಡಿ ತನಿಖೆ ನಡೆಸಲಿದೆ. ಎರಡು ತನಿಖೆಗಳ ಅಂತಿಮ ವರದಿ ಬಳಿಕ ಕೇಂದ್ರ ಸರ್ಕಾರ ತನ್ನ ಮುಂದಿನ ನಿರ್ಧಾರ ಕೈಗೊಳ್ಳಬಹುದು.

