ಕೃಷ್ಣಾ ತೀರದ ನೀರಾವರಿ ಯೋಜನೆಗಳ ಕಾರ್ಯಾರಂಭಕ್ಕೆ ಒತ್ತಾಯ” – ಶ್ರೀಕಾಂತ ಕುಲಕರ್ಣಿ

ಕೃಷ್ಣಾ ತೀರದ ನೀರಾವರಿ ಯೋಜನೆಗಳ ಕಾರ್ಯಾರಂಭಕ್ಕೆ ಒತ್ತಾಯ” – ಶ್ರೀಕಾಂತ ಕುಲಕರ್ಣಿ

ಈ ವರ್ಷ ಮುಂಗಾರಿ ಮಳೆಯ ಸಂಪೂರ್ಣವಾಗಿ ವಿಫಲವಾಗಿ ಬೆಳೆಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಹೋಗಿತ್ತು. ಈತ್ತಿಚಗೆ ಮಹಾರಾಷ್ಟ್ರದಲ್ಲಿ ಮಳೆ ಪ್ರಾರಂಭವಾಗಿ ನದಿಗೆ ನೀರು ಬಂದಿರುವದರಿಂದ ತುಬಚಿ-ಬಬಲೆಶ್ವರ ಹಾಗೂ ಕೆರೆ ತುಂಬುವ ಯೋಜನೆಗಳ ಯಂತ್ರಗಳು ನೀರೆತ್ತುವಕಾರ್ಯ ಪ್ರಾರಂಭವಾಗಬೇಕಿತ್ತು, ಆದರೆ ಆಗಿಲ್ಲ.
ಕರಿ ಮಸೂತಿ ಹತ್ತೀರ ಯೋಜನೆ ಕಾರ್ಯ ಆರಂಭವಾಗಿದ್ದರು ಜಮಖಂಡಿ ತಾಲೂಕಿನ ಯೋಜನೆಗಳು ಕಾರ್ಯಾರಂಭವಾಗದೆ ಇರುವದು ತುಂಬಾ ಕಳವಳಕಾರಿ.

ಅಧಿಕಾರಿಗಳೂ ಈ ಬಗ್ಗೆ ಸ್ಪಂಧಿಸದೆ ನೀರಾವರಿ ಇಲಾಖೆಯಿಂದ ನಿರ್ದೆಶನದ ನಿರಿಕ್ಷೆಯಲ್ಲಿ ಇದ್ದಾರೆ.
ನೀರಿಲ್ಲದೇ ಬೆಳೆ ಹಾಳಾಗಿವೆ. ಸಾವಳಗಿ, ಗೋಠೆ ಹಾಗೂ ತಿಕೋಟಾ ಭಾಗದ ಜನ, ಜಾನವಾರಗಳಿಗೆ ಕುಡಿಯುವ ನೀರಿನ ಸಮಸ್ಯ ತುಂಬಾ ಹದಗೆಟ್ಟಿದೆ. ಕಾರಣ ಈ ಭಾಗದ ಜನಪ್ರತಿನಿಧಿಗಳು ವಿಧಾನ ಮಂಡಳಗಳಲ್ಲಿ ಧ್ವನಿ ಎತ್ತಿ ಕುಡಿಯುವ ನೀರಿಗಾಗಿ ಪ್ರತಿ ಯೋಜನೆಗೆ ತಲಾ 0.5 ಟಿ.ಎಮ್.ಸಿ ನೀರನ್ನಾದರೂ ಎತ್ತಲೂ ತಕ್ಷಣ ಪರಿಹಾರ ಕೋಡಿಸಬೇಕಾಗಿ ಆಗ್ರಹಿಸುತ್ತೇನೆ.

Recent Articles

spot_img

Related Stories

Share via
Copy link