ಜಮಖಂಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಮಖಂಡಿ ಘಟಕಕ್ಕೆ ಅಪ್ಪು ಪೋತರಾಜ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಗೌರವಾಧ್ಯಕ್ಷರಾದ ಬಸವರಾಜ ಬಹೀರಶೆಟ್ಟಿ, ಡಾ.ಟಿ.ಪಿ.ಗಿರಡ್ಡಿ, ಮೋಹನ ಸಾವಂತ, ವಿಜಯ ಬಿರಾದಾರ ಅವರ ಸಮ್ಮುಖದಲ್ಲಿ ಸಂಘದ ಕಚೇರಿಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ನಡೆಯಿತು.
ಸಂಘದ ಉಪಾಧ್ಯಕ್ಷರಾಗಿ ಮುಹಮ್ಮದಅಯ್ಯುಬ ಕೊರತಿ, ಗುರು ಅರಕೇರಿ, ಕಾರ್ಯದರ್ಶಿಯಾಗಿ ಆರ್.ಎಸ್.ಹೊನಗೌಡ, ಖಜಾಂಚಿಯಾಗಿ ಶಿವಾನಂದ ಕೊಣ್ಣೂರ ಅವಿರೋಧವಾಗಿ ಆಯ್ಕೆಯಾದರು.
ಸಭೆಯಲ್ಲಿ ನಿಕಟಪೂರ್ವಅಧ್ಯಕ್ಷ ಎಂ.ಎನ್.ನದಾಫ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನಯ್ಯ ಮಠ, ಜಿಲ್ಲಾ ಕಾರ್ಯಕಾರಿ ಸಮೀತಿ ಸದಸ್ಯ ಆರೀಫ ಪೆಂಡಾರಿ, ಸದಸ್ಯರಾದ ಮಲ್ಲು ಬ್ಯಾಕೋಡ, ಗೋಪಾಲ ಪಾಟೀಲ, ಲಕ್ಷ್ಮೀಕಾಂತ ದುದಗಿ, ಬಸವರಾಜ ಕಾನಗೋಂಡ, ರಫೀಕ ಮಾರಕಪನಹಳ್ಳಿ, ನಾಗೇಶ ಜತ್ತಿ, ಸಂಗಮೇಶ ಬಿರಾದಾರ, ಭೀಮಶಿ ಗುಮ್ಮಕನವರ, ಇದ್ದರು.
