ಹಿಜಬ್ ಧರಿಸದೇ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಬಂಧನದ ಭೀತಿ

ತೆಹ್ರಾನ್: ದಕ್ಷಿಣ ಕೊರಿಯಾದಲ್ಲಿ ನಡೆದ ಗೋಡೆ ಹತ್ತುವ ಕ್ರೀಡಾಕೂಟದಲ್ಲಿ (ಕ್ಲೈಂಬಿಂಗ್‌ ಚಾಂಪಿಯನ್‌ಶಿಪ್) ಇರಾನ್ ಕ್ರೀಡಾಪಟು ಎಲ್ನಾಜ್ ರೆಕಾಬಿ (Elnaz Rekabi) ಹಿಜಬ್ (Hijab) ಧರಿಸದೇ ಭಾಗವಹಿಸಿದ್ದುದು ಈಗ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಪೂರಕವಾಗಿ ಸಿಯೋಲ್‌ನಲ್ಲಿ ಇರುವ ಇರಾನ್ ಅಧಿಕಾರಿಗಳು ಕ್ರೀಡಾಪಟುವನ್ನು ಸ್ವದೇಶಕ್ಕೆ ಕರೆದೊಯ್ಯಲು ಮಂಗಳವಾರ ವಿಮಾನ (Flight) ಹತ್ತಿಸಿದ್ದಾರೆ.

33 ವರ್ಷದ ರೆಕಾಬಿ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ಸ್ (Sports) ಕ್ಲೈಂಬಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ (Climbing Championships) ಹಿಜಬ್ ಧರಿಸದೇ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ಅವರು ರಾಜಧಾನಿ ತೆಹ್ರಾನ್ ತಲುಪಿದ ನಂತರ ಇರಾನ್ ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಎಲ್ನಾಜ್ ರೆಕಾಬಿ, ಆಕಸ್ಮಿಕವಾಗಿ ತಲೆಯಿಂದ ಹಿಜಬ್ ಜಾರಿತು. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಇರಾನ್ ಸಹ ವರದಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ರೆಕಾಬಿ ಕುರಿತು ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ ಎಂದು ಹೇಳಿದೆ. ಸೋಲ್‌ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಈ ಕುರಿತು ಪ್ರತಿಕ್ರಿಯೆ ನೀಡುವ ವೇಳೆ ಈ ಹಿಂದೆ ಹಿಜಬ್ ಧರಿಸಿ ರೆಕಾಬಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಫೋಟೋವನ್ನು ಹಂಚಿಕೊಂಡಿದೆ.

ಹಿಜಬ್ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ (Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಇರಾನ್‌ನಲ್ಲಿ ಹಿಜಬ್ ಸುಟ್ಟು, ತಮ್ಮ ಜಡೆಯನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಈವರೆಗೆ ಇಬ್ಬರು ಹುಡುಗಿಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಆದರೂ ಪ್ರತಿಭಟನೆ ಮುಕ್ತಾಯಗೊಂಡಂತೆ ಕಾಣುತ್ತಿಲ್ಲ.

Recent Articles

spot_img

Related Stories

Share via
Copy link