PFI ನಿಂದ 5 ಕೋಟಿ ರೂ ನಷ್ಟ ಪರಿಹಾರಕ್ಕೆ ಹೈಕೋರ್ಟ್‌ಗೆ KSRTC ಅರ್ಜಿ!

ತಿರುವನಂತಪುರಂ(ಸೆ.27):  ಭಯೋತ್ಪಾದನೆಗೆ ನೆರವು, ಉಗ್ರ ಕೃತ್ಯಕ್ಕೆ ಹಣ ಸಂಗ್ರಹ ಸೇರಿದಂತೆ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮೇಲೆ ದೇಶಾದ್ಯಂತ ದಾಳಿ ನಡೆದಿದೆ. ರಾಷ್ಟ್ರೀಯ ತನಿಖಾ ದಳ 15 ರಾಜ್ಯಗಳ 93 ಸ್ಥಳಗಳ ಮೇಲೆ ದಾಳಿ ಮಾಡಿದೆ. 100ಕ್ಕೂ ಹೆಚ್ಚು ನಾಯಕರು, ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ದಾಳಿಯನ್ನು ವಿರೋಧಿಸಿ ಪಿಎಫ್ಐ, ಎಸ್‌ಡಿಪಿಐ ದೇಶಾದ್ಯಂತ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆಯೂ ನಡೆದಿದೆ. ಪ್ರಮುಖವಾಗಿ ಕೇರಳದಲ್ಲಿ ಅತೀ ಹೆಚ್ಚು ಅನಾಹುತಗಳಾಗಿವೆ. ಕೇರಳ ಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿ ಪುಡಿ ಪುಡಿ ಮಾಡಿದ್ದಾರೆ. ಹಲವು ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಪ್ರತಿಭಟನೆಯಲ್ಲಿ ಕೇರಳ ಸಾರಿಗೆ ಸಂಸ್ಥೆಗೆ ಬರೋಬ್ಬರಿ 5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈ ಮೊತ್ತ ಭರಿಸುವಂತೆ ಕೇರಳ ಸಾರಿಗ ಸಂಸ್ಥೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಾಪ್ಯುಪಲ್ ಫ್ರಂಟ್ ಆಫ್ ಇಂಡಿಯಾ ಮೇಲೆ ಎನ್ಐಎ ಹಾಗೂ ಆಯಾ ರಾಜ್ಯ ಪೋಲೀಸರು ದಾಳಿ ನಡೆಸಿದ್ದಾರೆ. ಇದನ್ನು ವಿರೋಧಿಸಿ ಪಿಎಫ್ಐ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಈ ವೇಳೆ ಸಂಭವಿಸಿದ 5 ಕೋಟಿ ರೂಪಾಯಿ ಹಾನಿಯನ್ನು ಪಿಎಫ್ಐ ಭರಿಸಬೇಕು ಎಂದು ಕೇರಳ ಹೈಕೋರ್ಟ್‌ಗೆ ಸಾರಿಗೆ ಸಂಸ್ಥೆ ಮನವಿ ಮಾಡಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸೆಪ್ಟೆಂಬರ್ 23 ರಂದು ದೇಶಾದ್ಯಂತ ಪ್ರತಿಭಟೆನೆ(PFI Protest) ಮಾಡಿತ್ತು. ಆದರೆ ಕೇರಳದಲ್ಲಿ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ವೇಳೆ ಅತೀ ಹೆಚ್ಚು ಬಸ್‌ಗಳು(KSRTC) ಧ್ವಂಸಗೊಂಡಿತ್ತು. ಬೆಂಕಿ ಹಚ್ಚಿ ಬಸ್ ಮೇಲೆ ಆಕ್ರೋಶ ಹೊರಹಾಕಲಾಗಿತ್ತು. ಇದರಿಂದ ಕೇರಳ ಸಾರಿಗೆ ಸಂಸ್ಥೆ 5.06 ಕೋಟಿ ರೂಪಾಯಿ ನಷ್ಟವಾಗಿದೆ. ಇದೀಗ ಪಿಎಫ್ಐ ವಿರುದ್ಧ ಕೇರಳ ಸಾರಿಗೆ ಸಂಸ್ಥೆ ಕೇರಳ ಹೈಕೋರ್ಟ್‌ನಲ್ಲಿ(Kerala High Court) ಈ ಸಂಪೂರ್ಣ ಮೊತ್ತವನ್ನು ಪಿಎಫ್ಐ ಭರಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಎನ್ಐಎ(NIA Raids) ಹಾಗೂ ಆಯಾ ರಾಜ್ಯ ಪೊಲೀಸ್(Police) ಇಲಾಖೆಯಿಂದ ಪಿಎಫ್ಐ ಮೇಲೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇದರ ಬೆನ್ನಲ್ಲೇ ಇದೀಗ ಕೇರಳ ಸಾರಿಗೆ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದೆ. ಇಷ್ಟೇ ಅಲ್ಲ, ಪಿಎಫ್ಐ ಈಗಾಗಲೇ ಕೇರಳ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ. ಈ ಹಿಂದೆ ಪಿಎಫ್ಐ ದಿಢೀರ್ ಪ್ರತಿಭಟೆನೆ ವಿರುದ್ಧ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಸಾರ್ವಜನಿಕರಿಗೆ ಆದ ಸಮಸ್ಯೆಯನ್ನು ಗಮನಿಸಿದ ಕೋರ್ಟ್ ಪಿಎಫ್ಐ ಯಾವುದೇ ಪ್ರತಿಭಟೆ ಮಾಡುವುದಕ್ಕಿಂತ ಮೊದಲೇ ನೋಟಿಸ್ ನೀಡಬೇಕು. ಕನಿಷ್ಠ 7 ದಿನಕ್ಕೂ ಮೊದಲು ಪ್ರತಿಭಟನೆ ನೋಟಿಸ್ ಪೊಲೀಸರಿಗೆ ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ ಸೆ.23 ರಂದು ಕೇರಳದಲ್ಲಿ ಪಿಎಫ್ಐ ಮಾಡಿದ ಪ್ರತಿಭಟನೆಗೂ ಮುನ್ನ ಯಾವುದೇ ನೋಟಿಸ್ ನೀಡಿಲ್ಲ.

ಈ ಹಿಂದೆ ನಡೆದ ಪ್ರತಿಭಟನೆಗಳ ವೇಳೆ ಕೆಎಸ್‌ಆರ್‌ಟಿಸಿ ತನ್ನ ನಷ್ಟಗಳನ್ನು ಭರಿಸಿದೆ. ಆದರೆ ಇನ್ನು ಮುಂದಿನ ಪ್ರತಿಭಟನೆಯಲ್ಲಿನ ನಷ್ಟಗಳನ್ನು ಆಯಾ ಪ್ರತಿಭಟನೆ ಮಾಡುವ ಸಂಘಟನೆ, ಪಕ್ಷಗಳೇ ಭರಿಸಬೇಕು ಎಂದು ಮನವಿಯಲ್ಲಿ ಹೇಳಿದೆ.

ಪಿಎಫ್ಐ ಪ್ರತಿಭಟನೆಯಲ್ಲಿ ಕೇರಳ ಸಾರಿಗೆ ಸಂಸ್ಥೆಯ 58 ಬಸ್‌ಗಳು ಹಾನಿಯಾಗಿದೆ. ಅತೀ ದೊಡ್ಡ ನಷ್ಟ ಸಾರಿಗೆ ಸಂಸ್ಥೆಗೆ ಆಗಿದೆ. ಈ ಎಲ್ಲಾ ನಷ್ಟವನ್ನು ಪಿಎಫ್ಐ ಸಂಘಟನೆ ಭರಿಸಬೇಕು ಎಂದು ಮನವಿ ಮಾಡಿದೆ.

Recent Articles

spot_img

Related Stories

Share via
Copy link