ವಿಜಯನಗರ 07 : ಜಿಲ್ಲೆ ಹರಪನಹಳ್ಳಿಯ ಹೊಳಲು ಗ್ರಾಮದಲ್ಲಿ: ಸ್ಥಳೀಯ ಪಾಂಡುರಂಗ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಜುಲೈ 31ನೇ ಗುರುವಾರದಿಂದ ಅಗಸ್ಟ್ 6ರ ಬುಧವಾರದ ವರೆಗೆ 74ನೇ ದಿಂಡಿ ಉತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಜರುಗಿದವು. ಪ್ರತಿ ದಿನ ಶ್ರೀ ಹ.ಭ.ಪ ಜಿ.ಪಿ.ರಾವ್ ವ್ಯಾಸಪೀಠ ಹೊಸಪೇಟೆ ಇವರ ನೇತೃತ್ವದಲ್ಲಿ ಭಜನೆ, ಶ್ರೀ ಜ್ಞಾನೇಶ್ವರಿ ಪರಾಯಣ, ಹರಿಪಾಠ ಭಜನೆ, ಪ್ರಸಾದ, ಪ್ರವಚನ, ನಾಮಜಪ ಹಾಗೂ ಕೀರ್ತನೆಗಳು ನಡೆದವು.
ಬುಧವಾರ ಬೆಳಿಗ್ಗೆ ಮಹಿಳೆಯರಿಂದ ಜ್ಞಾನೇಶ್ವರಿ ಪರಾಯಣ ನಡೆಯಿತು. ನಂತರ ಭಜನೆ ಮೂಲಕ ಶ್ರೀಪಾಂಡುರಂಗ ಉತ್ಸವ ಮೂರ್ತಿಯೊಂದಿಗೆ ಗ್ರಾಮ ಪ್ರದಕ್ಷಿಣೆ ಮಾಡಲಾಯಿತು. ಈವೆಳೆ ಶ್ರೀಪಾಂಡುರAಗ ವೇಷಧರಿಸಿದ್ದ ದೀಪಾ ವಾದೋನಿ, ರುಕ್ಮಿಣಿ ವೇಷಧರಿಸಿದ್ದ ತೇಜಸ್ವಿನಿ ಹೆಬ್ಬರೆ ಎಲ್ಲರ ಗಮನಸೆಳೆದರಲ್ಲದೆ ಎಲ್ಲರಲ್ಲೂ ಭಕ್ತಿ ಇಮ್ಮಡಿಗೊಳಿಸಿದರು. ವಿಶೇಷವಾಗಿ ಸಂಗೀತಾ ಹೆಬ್ಬಾರೆ, ಶಿಲಾ ಪಟಗೆ, ಮುಕ್ತಾ ನವಲೆ, ರೂಪಾ ಪಟಗೆ, ದೀಪಾ ವಾದೋನಿ, ಚಂದ್ರಕಲಾ, ಪೂರ್ಣೀಮ ಹೆಬ್ಬಾರೆ, ಹಾಗೂ ಅಶ್ವಿನಿ ಗುಜ್ಜರ್ ಇವರು ವಿವಿಧ ಭಂಗಿಯಲ್ಲಿ ಹೆಜ್ಜೆ ಹಾಕುತ್ತಾ ಭಜನೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ವಾರದೊಂದಿಗೆ ನಡೆದುಕೊಂಡು ಬಮದಿದ್ದ ಎಲ್ಲಾ ಕಾರ್ಯಕ್ರಮಗಳು ಸಂಪನ್ನಗೊಂಡವು.
ಈ ಕಾರ್ಯಕ್ರಮದಲ್ಲಿ ಹೊಳಲು ಗುತ್ತಲ, ಬಸಾಪುರ, ಹಾವೇರಿ, ನೀಲಗುಂದ, ನಾಗತಿ ಬಸಾಪುರ, ತೆಲಗಿ, ರಾಣೆಬೆನ್ನೂರು, ಹಲುವಾಗಲು, ಕಕ್ಕರಗೊಳ್ಳ, ಸೋಗಿ, ಹೊನ್ನತ್ತಿ, ಬಂಕಾಪುರ, ಸವಣೂರು, ಹೂವಿನಹಡಗಲಿ, ಹೊಸಪೇಟೆ, ರಾಣೆಬೆನ್ನೂರು, ಹರಿಹರ, ದಾವಣಗೇರೆ, ಹಗರಿಬೊಮ್ಮನಹಳ್ಳಿ, ಕೊಪ್ಪಳ, ಹುಬ್ಬಳ್ಳಿ, ಹರಪನಹಳ್ಳಿ, ಕೊಟ್ಟೂರು ಪಟ್ಟಣಗಳಿಂದ ಆಗಮಿಸಿದ್ದ ಸಂತ ಮಾಹಾಶಯರು ಪಾಲ್ಗೊಂಡಿದ್ದರು.
ವರದಿ : ಮಧುಬಾಬು H ಹರಪನಹಳ್ಳಿ
ವಿಜಯನಗರ


