ಜಮಖಂಡಿ ಅಂಬೇಡ್ಕರ್ ಸರ್ಕಲನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯೋತ್ಸವ ಅಂಗವಾಗಿ ಚಂದ್ರಗೀರಿ ಪೇಠದ ಮುಖಂಡರು ಪುತ್ಶಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆಯನ್ನು ಸಲಿಸಿದರು.

ಜಮಖಂಡಿ ನಗರದ ಚಂದ್ರಗೀರಿ ಪೇಠದಲ್ಲಿ ಡಾ.ಬಿ.ಅರ್. ಅಂಬೇಡ್ಕರ್ ಅವರ 134 ನೇ ಜಯಂತಿಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಭವ್ಯ ಮೆರವಣಿಗೆಯನ್ನು ಮಾಡಲಾಯಿತು.

ಚಂದ್ರಗೀರಿ ಪೇಠದ ಹಿರಿಯ ಮುಖಂಡರಾದ. ಸುರೇಶ ನಡುವಿನಮನಿ ಅವರ ನೇತೃತ್ವದಲ್ಲಿ ಯವಕರ ತಂಡದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆಯನ್ನು ಸಲಿಸಿದರು.

‌ಡಿ ಎಸ್ ಎಸ್.ಭೀಮವಾದ ಜಿಲ್ಲಾ ಸಂಚಾಲಕ.ಮುಖಂಡ ಸುರೇಶ ನಡುವಿನಮನಿ ಮಾತನಾಡಿ. 134 ವರ್ಷಗಳು ಗತಿಸಿದರು ಸಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನದಂದು ಅಂಬೇಡ್ಕರ್ ಸರ್ಕಲನಲ್ಲಿ ಇವರು ಪುತ್ಶಳಿಗೆ ಪೂಜೆಯನ್ನು ಸಲಿಸಿ. ಗೌರವ ನಮನಗಳನ್ನು ಸಲಿಸಲಾಗುತ್ತಿತ್ತು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಚಂದ್ತಗೀರಿ ಪೇಠದಲ್ಲಿ ಮಾಡದೇ ಇತ್ತು. ಇವಾಗ ನಮ್ಮ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗಿದೆ. ಇದರಿಂದ ಮುಂದಿನ ಯುವಕರಿಗೆ ಪ್ರೇರಣೆ ಆಗಿದೆ. ಇನ್ನು ಮುಂದೆ ಪ್ರತಿವರ್ಷವೂ ಕೂಡಾ ಅಂಬೇಡ್ಕರ್ ಅವರ ಜಯಂತಿಯೋತ್ಸವವನ್ನು ಮಾಡಲಾಗುತ್ತಿದೆ ಎಂದರು.

ಚಂದ್ರಗೀರಿ ಪೇಠದಲ್ಲಿನ ಎಲ್ಲ ಯುವಕರನ್ನು ಒಂದು ಕೂಡಿಸಿ. ಸರಿಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ಜಯಂತಿಯನ್ನು ಆಚರಣೆ ಮಾಡಲಾಯಿತು..

ಸುಮಾರು ವರ್ಷಗಳ ಕಾಲ ಜಯಂತಿಯನ್ನು ಆಚರಣೆಯನ್ನು ನಮ್ಮ ಚಂದ್ತಗೀರಿ ಪೇಠದಲ್ಲಿ ಮಾಡದೆ ಕೇವಲ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಲಾಗುತ್ತಿತ್ತು. ಇವಾಗ ಗಲ್ಲಿಯ ಯುವಕರ ಪ್ರೋತ್ಸಾಹದಿಂದ ಮುಂದಾಳತ್ವ ವಹಿಸಿಕೊಂಡುಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಡಿಜೆ ಮೂಲಕ ಭವ್ಯವಾದ ಮೆರವಣಿಗೆಯನ್ನು ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜು ಮೇಲಿಕೇರಿ. ಈಶ್ವರ ವಾಳೇನ್ನವರ.
ರಮೇಶ ನಡುವಿನಮನಿ. ವಿಲಾಸ ನಡುವಿನಮನಿ. ಶರಣು ಮೂಲಂಗಿ.ಅರುಣ ಹಾದಿಮನಿ. ರಾಮ ನಡುವಿನಮನಿ. ಪರಸು ಹಾದಿಮನಿ ಸೇರಿದಂತೆ ಅನೇಕರು ಇದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಭವ್ಯವಾದ ಮೆರವಣಿಗೆಯನ್ನು ನಗರ ಪ್ರಮುಖ ರಸ್ತೆಯ ಮೂಲಕ ಡಿಜೆ.ಸೌಂಡದೊಂದಿಗೆ ಜರುಗಿತು.

#AGASTYA TIMES

Recent Articles

spot_img

Related Stories

Share via
Copy link