ಜಮಖಂಡಿ : ನಗರದ ಬಸವ ಭವನದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜಮಖಂಡಿ ಇವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಜಮಖಂಡಿ 27 : ನಗರದ ಬಸವ ಭವನದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜಮಖಂಡಿ ಇವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.

ಯಕ್ಷಗಾನ, ನೃತ್ಯ, ಸಂಗೀತ, ನಾಟಕ, ಭಾರವಾದ ವೇಷಭೂಷಣಗಳನ್ನು ತೊಟ್ಟು ಮುಖವೆಲ್ಲ ಬಣ್ಣ ಬಳೆದು ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿ ಕಾಲಿನಲ್ಲಿ ಗೆಜ್ಜೆ ಧರಿಸಿ ಗೆಜ್ಜೆಯ ನಾದದ ಮೂಲಕವೇ ಜನರ ಮನ ಗೆಲ್ಲುವ ಕಲೆಯುವು ಆಗಿದೆ.
ಕರ್ನಾಟಕ ಮತ್ತು ಕೇರಳದ ಗಮನಾರ್ಹ ಜಾನಪದ ರಂಗಭೂಮಿಯನ್ನಾಗಿ ಮಾಡುತ್ತದೆ ಯಕ್ಷಗಾನ ದೇವರ ಆರಾಧನೆಯಾಗಿದ್ದು ವಾಸ್ತವವಾಗಿ ಯಕ್ಷಗಾನದಂತಹ ಕಲೆಯೂ ಪ್ರೇಕ್ಷಕರನ್ನು ರಂಜಿಸುವು ಮೂಲಕ ಆಧ್ಯಾತ್ಮಿಕ ಜಾಗೃತಿ, ನೈತಿಕ ಮೌಲ್ಯಗಳನ್ನು ಹರಡುವ ಗುರಿಯನ್ನು ಹೊಂದಿವೆ.
ಕಳೆದ 20 ವರ್ಷಗಳಿಂದ ಜಮಖಂಡಿ ಹೋಟೆಲ್ ಮಾಲಿಕರ ಸಂಘವೂ ಉತ್ತರ ಕರ್ನಾಟಕದ ಜನತೆಗೆ ಯಕ್ಷಗಾನದ ಸವಿ ರುಚಿಯನ್ನು ನೀಡುತ್ತಾ ಬಂದಿದೆ ಈ ವರ್ಷ ಒಂದು ಹೆಜ್ಜೆಯನ್ನು ಮುಂದೆ ಇಟ್ಟು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿ ಹೋಟೆಲ್ ಉದ್ಯಮದಲ್ಲಿ ಅಪಾರ ಸಾಧನೆಗೈದ ನಗರದ ಆನಂದ ಭವನ ಹೋಟೆಲ್ ಮಾಲಿಕರಾದ ವಿಠ್ಠಲರಾವ ಗೋಪಾಲರಾವ ಪ್ರಭು ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಹೋಟೆಲ್ ಉದ್ಯಮಿ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದು ಒಂದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಮಾಜಿ. ಶಾಸಕ ಶ್ರೀಕಾಂತ ಕುಲಕರ್ಣಿ, ಸಿಪಿಐ ಗುರುನಾಥ ಚವ್ಹಾಣ, ಕಾನಿಪ ಅಧ್ಯಕ್ಷ ಅಪ್ಪು ಪೋತರಾಜ, ಪಿಡಿಓ ಸಂಘದ ರಾಜ್ಯಾದ್ಯಕ್ಷ ರಾಜು ವಾರದ, ಹಿರಿಯ ಪತ್ರಕರ್ತ ಮೋಹನ್ ಸಾವಂತ, ಹೋಟೆಲ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಸನ್ಮಾನಿಸಲಾಯಿತು.
ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ (ರಿ) ಹಾಲಾಡಿ, ಕುಂದಾಪೂರ ತಾಲ್ಲೂಕಿನ ಕಲಾವಿದರಿಂದ ರಂಗನಾಯಕಿ ಕಲಾಯನ ಮಾಡಿ ವಿಜಯನಗರ ಸಾಮ್ರಾಜ್ಯದ ಕಥಾಭಾಗವನ್ನು ಆಡಿ ತೋರಿಸಿದರು.
ಬಾಲಕಿ ವೈಷ್ಣವಿ ಶೆಟ್ಟಿ ಅವರ ಯಕ್ಷಗಾನ ನೃತ್ಯ ಸಭಿಕರ ಮೆಚ್ಚುಗೆ ಪಾತ್ರವಾಯಿತು.
ಈ ಕಾರ್ಯಕ್ರಮದಲ್ಲಿ ರಾಜು ಮೇಲಿನಕೇರಿ,ಸಂತೋಷ ಶೆಟ್ಟಿ ,ಜಯವಂತ ಘಾಟಗೆ ವಿಶ್ವನಾಥ ಶೆಟ್ಟಿ ,ಆನಂದ ಶೆಟ್ಟಿ ಚಂದ್ರಶೇಖರ ಶೆಟ್ಟಿ , ವಿನಯ ಶೆಟ್ಟಿ ,ವಿಜಯ ಶೆಟ್ಟಿ, ಕೃಷ್ಣಾ ಶೆಟ್ಟಿ , ಗಿರೀಶ್ ನಾಯರಿ, ಬಾಬು ದೇವಾಡಿಗ, ಗೋವಿಂದ ಶೆಟ್ಟಿ ,ಬಾಸ್ಕರ ದೇವಾಡಿಗ, ಸಂತೋಷ ಶೆಟ್ಟಿ ಪ್ರೋ ಗದ್ಯಾಳ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link