ಮುದ್ದೇಬಿಹಾಳ:-ತಾಲೂಕಿನ ಢವಳಗಿ  ಶ್ರೀ ಸುಕ್ಷೇತ್ರ ಅಂಕಲಿಮಠದ ಶ್ರೀ ಶ್ರೀ ಶ್ರೀ ವೀರಭದ್ರಮಹಾಸ್ವಾಮಿಗಳ 1056 ನೇ ತುಲಾಭಾರ ಸಮಾರಂಭ.

ಮುದ್ದೇಬಿಹಾಳ:-ತಾಲೂಕಿನ ಢವಳಗಿ ಗ್ರಾಮದ ಕದಂಬ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಎಮ್ ಕೆ ಗುಡಿಮನಿ ಅವರ ಜನುಮದಿನದ ಪ್ರಯುಕ್ತವಾಗಿ ಶ್ರೀ ಸುಕ್ಷೇತ್ರ ಅಂಕಲಿಮಠದ ಶ್ರೀ ಶ್ರೀ ಶ್ರೀ ವೀರಭದ್ರಮಹಾಸ್ವಾಮಿಗಳ 1056 ನೇ ತುಲಾಭಾರ ಸಮಾರಂಭ ಮತ್ತು ಢವಳಗಿ ಕ್ಲಸ್ಟರ್ ನ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡುವುದರ ಮುಖಾಂತರ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಆಸೆಯಂತೆ ಆಚರಿಸಿಕೊಂಡರು.ಎಮ್ ಕೆ ಗುಡಿಮನಿ ಅವರ ಕಿರಿಯ ಸಹೋದರ ಸುಭಾಷ ಗುಡಿಮನಿ ಅವರು ಮಾತನಾಡಿ ನಾವು ಮೂರು ಜನ ಸಹೋದರರು ದುಡಿದ ವಾರ್ಷಿಕ ಆದಾಯದಲ್ಲಿ ಶೇಕಡಾ 20ರಷ್ಟು ಸಮಾಜ ಸೇವೆಗಾಗಿ ಮಿಸಲಿಟ್ಟು ನಾವು ಮುಂದಿನ ದಿನಗಳಲ್ಲಿ ಗುಡಿಮನಿ ಪೌಂಡೆಷನ ಕೂಡಾ ಮಾಡುತ್ತೆವೆ ಎಂದು ಇದೆ ಸಂದರ್ಭದಲ್ಲಿ ಹೇಳಿದರು.
ಮನುಷ್ಯನಿಗೆ ಹುಟ್ಟಿನ ಜೋತೆಗೆ ಸಾವು ಕೂಡಾ ನಿಶ್ಚಿತವಾಗಿ ಬರುತ್ತದೆ.ಆದರೆ ಹುಟ್ಟು ಸಾವಿನ ನಡುವೆ ನಮ್ಮ ಜೀವನ ನಡೆಸಬೇಕು ಅದು ಒಳ್ಳೆಯ ಮಾರ್ಗದಲ್ಲಿ, ಸಮಾಜಕ್ಕೆ ಒಳ್ಳೆಯದು ಮಾಡುವ ನಿಟ್ಟಿನಲ್ಲಿ,ಬಡವ ಶ್ರೀಮಂತ, ಮೇಲು ಕೀಳೆಂಬ ಭಾವನೆ ಬಿಟ್ಟು ಒಳ್ಳೆಯ ಮಾರ್ಗದಲ್ಲಿ ನಡೆಯುವುದೇ ನಿಜವಾದ ಬದುಕು ಎಂದು ಅಂಕಲಿಮಠದ ಪರಮ ಪೂಜ್ಯರು ಮಾತನಾಡಿದರು. ನಾವು ಬದು

ತಂದೆ ತಾಯಿ ಋಣ ತೋರಿಸಬಹುದು ಆದರೆ ಗುರುವಿನ ಋಣ ಯಾರಿಂದಲೂ ತೀರಿಸಲು ಆಗದು,ಆದರೆ ಗುಡಿಮನಿ ಕುಟುಂಬದ ಸದಸ್ಯರು ಗುರುವಿಗೆ ತುಲಾಭಾರ ಮಾಡುವುದರ ಮುಖಾಂತರ ಸ್ವಲ್ಪಾದರು ಗುರುವಿನ ಋಣ ತೀರಿಸದರು ಎಂದು ಡಾ.ಚೆನ್ನವೀರ ದೇವರು ಮಾತನಾಡಿದರು.

ಮಡಿವಾಳಪ್ಪ ಗುಡಿಮನಿ ಅವರು ಹಿಂದೆ ನಡೆದುಕೊಂಡು ಬಂದ ಹಾದಿ ಬಹಳ ಕಷ್ಟದಲ್ಲಿ ಇತ್ತು. ಅವರ ಸ್ವಚ್ಛ ಮನಸ್ಸೆ ಕಾರಣ ಇಷ್ಟೊಂದು ಜನ ಸೇರಿದಕ್ಕೆ ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ಮಾತನಾಡಿದರು.
ಸಿ ಬಿ ಅಸ್ಕಿ, ಎನ್ ಆರ್ ಮೊಕಾಶಿ ವಕೀಲರು ಮಾತನಾಡಿದರು.
ಡಾ.ಚೆನ್ನವೀರ ದೇವರು ಕುಂಟೋಜಿ, ಅಮರಗೊಂಡ ಶಿವಚಾರ್ಯರು ಪುರವರ ಹಿರೇಮಠ ತುರವಿಹಾಳ,ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರು ಪ್ರಭುಗೌಡ ದೇಸಾಯಿ, ಮುದ್ದೇಬಿಹಾಳ ಪಿಎಸ್ಐ ಆರೀಪ್ ಮುಶಾಪುರಿ,ಸಿ ಬಿ ಅಸ್ಕಿ,ಸಿದ್ದನಗೌಡ ಬಿರಾದಾರ, ಎಸ್ ಎಚ್ ಜೈನಾಪುರ, ಎನ್ ಆರ್ ಮೊಕಾಶಿ,ಅಭಿವೃದ್ಧಿ ಅಧಿಕಾರಿಗಳಾದ ಆನಂದ ಹಿರೇಮಠ, ರಾಜುಗೌಡ ಗೌಡರ,ದುಂಡಪ್ಪ ಅರಸುಣಗಿ,ಅರವಿಂದ ಕಾಶಿನಕುಂಟಿ,ಗ್ರಾಮ ಪಂಚಾಯತಿ ಅದ್ಯಕ್ಷರು ಶ್ರೀಮತಿ ಹಣಮವ್ವ ಹರಿಜನ,ಸೂಗರೇಶ ಬಾಳಿಕಾಯಿ, ಸೇರಿದಂತೆ ತಮ್ಮ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Recent Articles

spot_img

Related Stories

Share via
Copy link