ಬಾಗಲಕೋಟೆ: ಪ್ರೌಢ ಶಾಲೆಯೊಂದರ ವಿದ್ಯಾರ್ಥಿಗಳು ಹೆಬ್ಬುಲಿ ಸಿನೆಮಾ ಸ್ಟೈಲ್ ನಲ್ಲಿ ಕಟಿಂಗ್ ಮಾಡಿಕೊಂಡು ಓದಿನತ್ತ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ, ಆ ಶಾಲೆಯ ಮುಖ್ಯಾಧ್ಯಾಪಕರು ನೇರವಾಗಿ ಕ್ಷೌರದ ಅಂಗಡಿಗಳ ಮಾಲಿಕರಿಗೆ ಬರೆದ ಪತ್ರ ವೈರಲ್ ಆಗಿದ್ದು, ಇದಕ್ಕೆ ಸಾರ್ವಜನಿಕ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಶಿವಾಜಿ ನಾಯಕ ಎಂಬುವವರು, ಅದೇ ಗ್ರಾಮದಲ್ಲಿ ಇರುವ ಸುಮಾರು ಐದು ಕ್ಷೌರ ಅಂಗಡಿಗಳಿಗೆ ನೇರವಾಗಿ ಪತ್ರ ಬರೆದು, ತಮ್ಮ ಪ್ರೌಢ ಶಾಲೆಯ ಬಾಲಕರಿಗೆ ಹೆಬ್ಬುಲಿ ಸಿನೆಮಾ ಶೈಲಿಯ ಹಾಗೂ ಇನ್ನಿತರೆ ಬೇರೆ ಬೇರೆ ಸ್ಟೈಲ್ ನಲ್ಲಿ ಕಟಿಂಗ್ ಮಾಡದಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ಒಂದು ವೇಳೆ, ಅಂತಹದ್ದೇ ಕಟಿಂಗ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರೆ, ಆಯಾ ಮಕ್ಕಳ ಪಾಲಕರಿಗೆ ಅಥವಾ ನಮಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.
NEWS BURO : AGASTYA TIMES
