ವಿಧಾನ ಸಭೆ ಇರಲಿ, ವಿಧಾನ ಪರಿಷತ್ ಇರಲಿ ಅಲ್ಲಿ ಯಾವುದೇ ಪಕ್ಷಕ್ಕೆ ಸೇರಿದ ಸ್ಪೀಕರ್ ಇರಲಿ, ಅವರು ಆಸ್ಥಾನದಲ್ಲಿ ಕುಳಿತ ಮೇಲೆ ಎಲ್ಲರನ್ನೂ ಸಮಾನ ಭಾವದಿಂದ ನೋಡಬೇಕಾದದ್ದು ಅವರ ಕರ್ತವ್ಯವೂ ಹೌದು. ಜೊತೆಗೆ ಅದು ಆ ಸ್ಥಾನದ ಮರ್ಯಾದೆಯೂ ಹೌದು. ಅದನ್ನು ಬಿಟ್ಟು ಆ ಸ್ಥಾನದಲ್ಲಿ ಕುಳಿತ ಬಳಿಕವೂ ತಮ್ಮ ಮಾತೃ ಪಕ್ಷ, ನಮ್ಮವರು ಎಂಬುದಾಗಿ ಒಂದು ಪಕ್ಷದ ಪರ ಮತ್ತು ಮತ್ತೊಂದು ಪಕ್ಷದ ವಿರುದ್ಧ ಅಸಮಾನ ನಿಲುವುಗಳನ್ನು ತೆಗೆದುಕೊಂಡರೆ ಸಭಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿ, ಆ ಸ್ಥಾನಕ್ಕೆ ಅಪಾರ ಎಸಗಿದಂತೆ ಎಂಬುದು ನಿರ್ವಿವಾದ.
ಈಗ ಇಂತಹ ಒಂದು ಅಪವಾದಕ್ಕೆ ತುತ್ತಾಗಿರುವವರು ವಿಧಾನ ಸಭಾ ಸಭಾಧ್ಯಕ್ಷ ಯು. ಟಿ. ಖಾದರ್ ಅವರು. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಮೊನ್ನೆಯಷ್ಟೇ ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಅಮಾನತು ಮಾಡುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ಮಾಡಿರುವುದಲ್ಲದೆ, ತಮ್ಮ ಸ್ವ ಪಕ್ಷ (ಕಾಂಗ್ರೆಸ್) ಪ್ರೇಮವನ್ನು ಮೆರೆದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಇವರ ಈ ನಡೆಯನ್ನು ಖಂಡಿಸಿ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಅವರು ಯು. ಟಿ. ಖಾದರ್‌ಗೆ ಪತ್ರ ಬರೆದಿದ್ದಾರೆ. ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಏಕಪಕ್ಷೀಯ ನೆಲೆಯಲ್ಲಿ ಅಮಾನತು ಮಾಡಿರುವ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ಕುಹಕವಾಡಿದ್ದಾರೆ. ಇಂತಹ ನಡೆಯನ್ನು ನಾವು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನೀವು ಆ ಸ್ಥಾನದಲ್ಲಿ ಕುಳಿತು, ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಸಮರ್ಥವಾಗಿ ಎತ್ತಿ ಹಿಡಿಯುವಿರಿ ಎಂಬ ನಮ್ಮ ನಿರೀಕ್ಷೆ ಸುಳ್ಳಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸೇರಿ ಒಟ್ಟು ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಪಕ್ಷದವರ ಎದೆಯಲ್ಲಿ ಅಂತರ್ಗತವಾಗಿರುವ ಹಿಟ್ಲರ್‌ನನ್ನು ಪ್ರದರ್ಶನಕ್ಕೆ ಇಟ್ಟಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೦೪ ರಿಂದ ಈ ವರೆಗೆ ನಾನು ಸದನ ದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವೂ ಸಾಕ್ಷಿಯಾದವರು. ಅನಾರೋಗ್ಯ, ಅಗತ್ಯ ತುರ್ತು ಸಂದರ್ಭದಲ್ಲಿ ಮಾತ್ರ ನಾನು ಸದನಕ್ಕೆ ಗೈರಾದದ್ದು. ವಿಧಾನ ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವುದು ಪ್ರತಿಯೋರ್ವ ಶಾಸನ ಕರ್ತವ್ಯ ಎಂದು ಭಾವಿಸಿ, ಅದರಂತೆ ನಡೆದುಕೊಂಡವರು ನಾವು. ಆದರೆ ನಿಮ್ಮ ಪಕ್ಷದ ಅಜೆಂಡಾವನ್ನು ಸಾಧಿಸಲು, ನಾವೆಲ್ಲರೂ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಬಾರದ ಹಾಗೆ ಮಾಡಿದಿರಿ. ಇಂತಹ ತಮಗೆ ದೀರ್ಘದಂಡ ನಮಸ್ಕಾರ. ಅನಂತಾನಂತ ಧನ್ಯವಾದಗಳು ಎಂದು ಹೇಳಿದ್ದಾರೆ.
ನೀವು ನಡೆದುಕೊಂಡು ರೀತಿ ಸ್ಪೀಕರ್ ಸ್ಥಾನಕ್ಕೆ ಹೊಂದಿಕೊಳ್ಳುವ ಹಾಗೆ ಇತ್ತೇ?, ಆತ್ಮವಂಚನೆ ಮಾಡಿಕೊಳ್ಳದೆ ಹೇಳಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪ್ರಪಂಚದಲ್ಲಿ ಯಾರನ್ನು ಬೇಕಾದರೂ ವಂಚಿಸಬಹುದು. ಆದರೆ ಮನುಷ್ಯ ತನಗೆ ತಾನೇ ವಂಚನೆ ಮಾಡಿಕೊಳ್ಳುವುದು ಅಸಾಧ್ಯ. ಮೊದಲ ಅಧಿವೇಶನದಲ್ಲೇ ಶಾಸಕರನ್ನು ಅಮಾನತು ಮಾಡುವ ಮೂಲಕ ನೀವೊಬ್ಬ ಸರ್ವಾಧಿಕಾರಿ ಎನ್ನುವುದನ್ನು ಸಾಬೀತು ಮಾಡಿದಿರಿ. ಸದನ ದಲ್ಲಿ ವಿ ಪಕ್ಷ ನಾಯಕರು ಧರಣಿ ಮಾಡುವಾಗಲೇ ನೀವು ಪ್ರಶ್ನೋತ್ತರ ಕಲಾ ನಡೆಸಿದಿರಿ. ಆಗಲೇ ನೀವು ಪಕ್ಷ ಪಾ ತಿ ಯಾಗಿ ನಡೆದು ಕೊಲ್ಲುವ ವಾಸನೆ ನಮ್ಮೆಲ್ಲರಿಗೂ ಬಡಿದಿತ್ತು. ಮತ್ತೂ ಒಂದು ಹೆಜ್ಜೆ ಮುಂದೆ ಹೋದ ನೀವು ಸೋನಿಯಾ ಗಾಂಧಿ ನೀಡಿದ ಔತಣ ಕೂಟದಲ್ಲಿ ಭಾಗವಹಿಸಿದಿರಿ. ಅಯೋಗ್ಯರಿಗೆ ರಾಜಾತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ಬಳಸಿದ ಸರ್ಕಾರದ ನಿಲುವನ್ನು ಪ್ರಶ್ನಿಸಿದ ನಮ್ಮ ಹೋರಾಟ ಹತ್ತಿಕ್ಕಿ ಕಲಾಪವನ್ನು ಕಾಂಗ್ರೆಸ್ ಕಲಾಪವನ್ನಾಗಿಸಿದಿರಿ. ಇಂತಹ ಸಂವಿಧಾನ ಬಾಹಿರ ಕೆಲಸ ಮಾಡಿದ ನಿಮಗೆ ಅಭಿನಂದನೆ ಸಲ್ಲಿಸಬೇಕಲ್ಲವೇ ಎಂದು ಕುಹಕವಾಡಿದ್ದಾರೆ.
ಖಾದರ್ ಅವರೇ, ಸ್ಪೀಕರ್ ಸ್ಥಾನ ಆಳುವವರ ಆಸೆಗೆ ಗೋಣು ಪಡಿಸುವ ಅಡ್ಡೆಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಒಟ್ಟಿನಲ್ಲಿ ಖಾದರ್ ಅವರ ಏಕಪಕ್ಷೀಯ ನಡೆಗೆ ವಿಪಕ್ಷಗಳ ಜೊತೆಗೆ ಸಾರ್ವಜನಿಕ ವಲಯದಲ್ಲಿಯೂ ಅಸಮಾಧಾನ ಎದ್ದಿರುವುದಂತೂ ಸುಳ್ಳಲ್ಲ. ಪಕ್ಷದ ಆಸೆಗೆ ತಾನು ಕಾಲ ಸ್ಥಾನವನ್ನು ಅಲಂಕರಿಸಿದ್ದೇನೆ ಎಂಬುವುದನ್ನೇ ಮರೆತ ಖಾದರ್ ಅವರ ನಡೆ ನಿಜಕ್ಕೂ ಆಕ್ಷೇಪಣೀಯ.
