ಭಯೋತ್ಪಾದನೆ ಮತ್ತು ಭಯೋತ್ಪಾದಕರು ಇಡೀ ವಿಶ್ವವನ್ನೇ ನಿದ್ದೆಗೆಡಿಸಿರುವ ದೊಡ್ಡ ಪಿಡುಗು. ಭಾರತಕ್ಕಂತೂ ಬಾಹ್ಯ ಉಗ್ರರು ಮತ್ತು ಅವರ ಜೊತೆಗೆ ಕೈ ಜೋಡಿಸಿ ದೇಶದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಆಂತರಿಕ ಉಗ್ರರ ಸಮಸ್ಯೆ ದೊಡ್ಡ ತಲೆನೋವೆಂದೇ ಹೇಳಬಹುದು.
ಪ್ರಧಾನಿ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಬಾಹ್ಯ ಉಗ್ರರ ಹುಟ್ಟಡಗಿಸುವ ಕೆಲಸ ಮತ್ತು ಆಂತರಿಕ ಉಗ್ರರನ್ನು ಅವರು ಅವಿತಿರುವ ಬಿಲದಿಂದ ಹುಡುಕಿ ತೆಗೆದು ಶಿಕ್ಷೆಸುವ ಕೆಲಸ ನಡೆಯುತ್ತಿದೆ ಎಂಬುದೊಂದು ಸಂತೋಷದ ವಿಷಯ. ಆದರೆ ಬಗೆದಷ್ಟೂ ಉಗ್ರರ ಸಾಲು ಬೆಳೆಯುತ್ತಲೇ ಹೋಗುತ್ತಿರುವುದು ಮತ್ತು ಅವರೆಲ್ಲರೂ ಶಾಂತಿ ದೂತ ಸಮುದಾಯಕ್ಕೆ ಸೇರಿದವರು ಎನ್ನುವುದು ಮತ್ತೊಂದು ಆತಂಕದ ವಿಷಯ.
ಇತ್ತೀಚೆಗೆ ನಮ್ಮ ರಾಜ್ಯ ಕರ್ನಾಟಕದಲ್ಲಿಯೂ ಉಗ್ರಗಾಮಿಗಳ ಸಮಸ್ಯೆ ಹೆಚ್ಚಾಗಿದೆ. ಕಳೆದ ಕೆಲ ಸಮಯದ ಹಿಂದೆ ಮಂಗಳೂರನ್ನು ಸ್ಫೋಟಿಸಲು ಹೊರಟ ಶಾರಿಕ್ನಿಂದ ತೊಡಗಿ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸೆರೆಸಿಕ್ಕ ಶಾಂತಿದೂತ ಸಮುದಾಯದ ಸೂ ಸೈಡ್ ಬಾಂಬರ್ ಸೇರಿ ಐವರು ಉಗ್ರರ ವರೆಗೆ, ಎಲ್ಲರಿಗೂ ಭಯೋತ್ಪಾದಕರ ನಂಟಿರುವುದನ್ನು ಈಗಾಗಲೇ ತನಿಖಾ ಸಂಸ್ಥೆ ಬಯಲು ಮಾಡಿದೆ. ಈ ದಾಖಲೆಗಳು ನಿಜಕ್ಕೂ ಅಪಾಯಕಾರಿಯೇ ಸರಿ. ಬೆಂಗಳೂರಿನಲ್ಲಿ ಸೆರೆ ಸಿಕ್ಕ ಉಗ್ರರು ನೀಡಿರುವ ಮಾಹಿತಿ ಬೆಚ್ಚಿ ಬೀಳಿಸುವಂತಿದ್ದು, ಅವರಿಗೆ ಜೈಲೊಳಗಿರುವ ಉಗ್ರರೇ ಗೈಡ್ ಮಾಡುತ್ತಿದ್ದರು ಎನ್ನುವುದು ನಮ್ಮ ದೇಶ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ.
ಬಂಧಿತ ಉಗ್ರರು ತನಿಖಾಧಿಕಾರಿಗಳ ಎದುರು ಬಾಯಿ ಬಿಟ್ಟಿರುವ ಹಾಗೆ, ಜೈಲಿನ ಒಳಗಿದ್ದುಕೊಂಡೇ ಹಿಂದೂಗಳನ್ನು ಮತಾಂತರ ಮಾಡುವ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಮಾಯಕ ಹಿಂದೂ ಹುಡುಗರನ್ನು ಗುರಿಯಾಗಿಸಿಕೊಂಡು ಇವರು ಇಸ್ಲಾಂ ಸಮುದಾಯಕ್ಕೆ ಕನ್ವರ್ಟ್ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಈ ವರೆಗೂ ಸುಮಾರು ಮೂವತ್ತು ಹಿಂದೂ ಯುವಕರನ್ನು ಕನ್ವರ್ಟ್ ಮಾಡಿದ್ದು, ಬಡ ಹಿಂದೂ ಹುಡುಗರೇ ಇವರ ಟಾರ್ಗೆಟ್ ಎಂಬ ಸ್ಪೋಟಕ ಸತ್ಯವನ್ನು ಸಹ ಈ ಉಗ್ರರು ಬಯಲು ಮಾಡಿದ್ದಾರೆ.
ಬಂಧಿತ ಉಗ್ರ ನಜೀರ್ ಎಂಬಾತ ಈ ವಿಚಾರವನ್ನು ಬಯಲು ಮಾಡಿದ್ದು, ಈತ ಉಗ್ರರಿಗಿದ್ದ ಹೈ ಸೆಕ್ಯೂರಿಟಿ ಸೆಲ್ ನಲ್ಲೇ ಬಂಧಿಯಾಗಿದ್ದ. ಜೈಲಿಗೆ ಮೀಸೆ ಬೋಳಿಸಿ, ಗಡ್ಡ ಬಿಟ್ಟ ಕೈದಿಗಳು ಬಂದರೆ ಅವರನ್ನು ಸಹ ಉಗ್ರರಿಗೆ ನಿಗದಿ ಮಾಡಿರುವ ಹೈ ಸೆಕ್ಯೂರಿಟಿ ಸೆಲ್ ನಲ್ಲೇ ಇರಿಸಿಕೊಳ್ಳುತ್ತಿದ್ದ. ಜೈಲು ಸಿಬ್ಬಂದಿ ಇದನ್ನು ಕಂಡೂ ಕಾಣದಂತಿದ್ದರು ಎನ್ನುವ ವಿಚಾರ ಸಹ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಇದು ಬೆಂಗಳೂರಿನಲ್ಲಿ ಸೆರೆ ಸಿಕ್ಕ ಉಗ್ರರು ಬಾಯ್ಬಿಟ್ಟ ಕಥೆಯಾದರೆ, ಅಲೀಘರ್ನ ಮುಸ್ಲಿಂ ಯೂನಿವರ್ಸಿಟಿಯ ವಿದ್ಯಾರ್ಥಿ ಒಬ್ಬನನ್ನು ಭಯೋತ್ಪಾದಕರ ಜೊತೆಗೆ ನಂಟು ಹೊಂದಿದ ಆರೋಪದಲ್ಲಿ ಬಂಧಿಸಲಾಗಿದೆ. ಬಂಧಿತ ನನ್ನು ಶಾಂತಿ ದೂತ ಸಮುದಾಯದ ಫೈಜರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಬಂಧಿತ ಉಗ್ರ ಮತ್ತು ಆತನ ಸಹಚರರು ಐಸಿಸ್ ಉಗ್ರ ಸಂಘಟನೆಗೆ ನಿಷ್ಠೆಯಿಂದ ಇರುವುದಾಗಿ ಪ್ರತಿಜ್ಞೆ ಮಾಡಿದ್ದರು ಎನ್ನುವುದು ಸಹ ತನಿಖೆ ವೇಳೆ ಬಯಲಾಗಿದೆ.
ಇತ್ತೀಚೆಗೆ ತನಿಖಾ ಸಂಸ್ಥೆಗಳ ವಶವಾಗುತ್ತಿರುವ ಉಗ್ರರಲ್ಲಿ ಹೆಚ್ಚಿನವರು ವಿದ್ಯಾವಂತ ಯುವಕರು ಎನ್ನುವುದು ನೋವಿನ ಸಂಗತಿ. ದೇಶವನ್ನು ಉಗ್ರರಿಗೆ ಮುಕ್ತಿ ತಿನ್ನಿಸಲು ಹೊರಡುವ ಇಂತಹ ಕ್ರಿಮಿಗಳು ನಮ್ಮ ನಿಮ್ಮ ಸುತ್ತಲಲ್ಲಿಯೂ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಉಗ್ರರಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿ ಕೊಡುವ, ಅವರನ್ನು ಸಹೋದರರೆನ್ನುವ ಪಕ್ಷಗಳು, ಬುದ್ಧಿ ಜೀವಿಗಳ ಕಾರಣದಿಂದಲೇ ಯುವಕರು ಉಗ್ರವಾದದತ್ತ ಮುಖ ಮಾಡುತ್ತಿದ್ದಾರೆ ಎನ್ನುವುದು ನಿರ್ವಿವಾದ.
ದೇಶಕ್ಕೆ ಮಾರಕವಾದ ಇಂತಹ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುವ, ಅನುಕೂಲ ಒದಗಿಸಿಕೊಡುವ ನಾಮರ್ಧರಿಗೆ ಕಠಿಣಾತಿಕಠಿಣ ಶಿಕ್ಷೆಯಾದಲ್ಲಿ ಮಾತ್ರ ಈ ದೇಶವನ್ನು ಉಗ್ರರ ಬಂಧನದಿಂದ ಕಾಪಾಡಿಕೊಳ್ಳುವುದು ಸಾಧ್ಯ.
