17 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಜಯಭೇರಿ : ಉತ್ತರ ಪ್ರದೇಶ ನಗರಪಾಲಿಕೆ ಚುನಾವಣೆ.

ಲಖನೌ (ಮೇ 14, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಉತ್ತರ ಪ್ರದೇಶ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಂಪಾದಿಸಿದೆ. 17 ಮಹಾನಗರ ಪಾಲಿಕೆಗಳ ಪೈಕಿ ಎಲ್ಲ 17 ಪಾಲಿಕೆಗಳೂ ಬಿಜೆಪಿ ಪಾಲಾಗಿವೆ. ಬಿಎಸ್‌ಪಿ ಹಾಗೂ ಪ್ರಮುಖ ಪ್ರತಿಪಕ್ಷವಾದ ಸಮಾಜವಾದಿ ಪಕ್ಷ ಶೂನ್ಯ ಸಂಪಾದಿಸಿದೆ.

ಲಖನೌ, ಮಥುರಾ, ಬರೇಲಿ, ಮೇರಠ್‌, ಕಾನ್ಪುರ, ಪ್ರಯಾಗರಾಜ್‌, ಅಲಿಗಢ, ಮೊರಾದಾಬಾದ್‌, ಫಿರೋಜಾಬಾದ್‌, ಗೋರಖಪುರ, ವಾರಾಣಸಿ, ಗಾಜಿಯಾಬಾದ್‌, ಬರೇಲಿ, ಶಹಜಹಾನ್‌ಪುರ, ಝಾನ್ಸಿ, ಅಯೋಧ್ಯೆಗಳಲ್ಲಿ ಬಿಜೆಪಿ ಗೆದ್ದಿದೆ. ಆಗ್ರಾದಲ್ಲಿ ಸಹ ಬಿಜೆಪಿ ಗೆದ್ದಿದೆ. ಈ ಹಿಂದೆ ಮೇರಠ್‌ ಹಾಗೂ ಅಲಿಗಢದಲ್ಲಿ ಬಿಎಸ್‌ಪಿ ಅಧಿಕಾರದಲ್ಲಿತ್ತು. ಮಿಕ್ಕೆಲ್ಲ ಪಾಲಿಕೆಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು.

24 ವರ್ಷ ಬಳಿಕ ಜಲಂಧರ್‌ನಲ್ಲಿ ಕಾಂಗ್ರೆಸ್‌ಗೆ ಸೋಲು
ಜಲಂಧರ್‌ (ಪಂಜಾಬ್‌): ಜಲಂಧರ್‌ ಲೋಕಸಭೆ ಉಪಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌ನ ಕರ್ಮಜಿತ್‌ ಕೌರ್‌ ಅವರನ್ನು ರಾಜ್ಯದ ಆಡಳಿತಾರೂಢ ಆಪ್‌ ಅಭ್ಯರ್ಥಿ ಸುಶೀಲ್‌ ರಿಂಕು ಸುಮಾರು 48 ಸಾವಿರ ಅಂತರದಿಂದ ಮಣಿಸಿದ್ದಾರೆ. ಇಲ್ಲಿ 24 ವರ್ಷ ಬಳಿಕ ಇದೇ ಮೊದಲ ಬಾರಿ ಕಾಂಗ್ರೆಸ್‌ ಸೋಲು ಅನುಭವಿಸಿದೆ.

ವಿಧಾನಸಭೆ ಉಪ ಚುನಾವಣೆ: ಅಪ್ನಾದಳಕ್ಕೆ 2, ಬಿಜೆಡಿಗೆ 1 ಸ್ಥಾನ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಜತೆಗೆ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶವೂ ಪ್ರಕಟವಾಗಿದೆ. ಬಿಜೆಡಿಗೆ 1, ಬಿಜೆಪಿ ಮಿತ್ರಪಕ್ಷ ಅಪ್ನಾದಳಕ್ಕೆ 2 ಸ್ಥಾನ, ಮಣಿಪುರದ ವಿಪಕ್ಷ ಯುಡಿಪಿಗೆ 1 ಸ್ಥಾನ ಬಂದಿದೆ. ಜತೆಗೆ ಪಂಜಾಬ್‌ ಲೋಕಸಭೆ ಉಪಚುನಾವಣೆಯಲ್ಲಿ ಆಪ್‌ ಜಯಿಸಿದೆ.

 

ಒಡಿಶಾದ ಝರ್ಸುಗುಡಾ ವಿಧಾನಾಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಅಭ್ಯರ್ಥಿ ದೀಪಾಲಿ ದಾಸ್‌ ಅವರು ಬಿಜೆಪಿ ಅಭ್ಯರ್ಥಿ ಟಂಕಾಧರ ತ್ರಿಪಾಠಿ ಅವರನ್ನು 48,721 ಮತದಿಂದ ಮಣಿಸಿದ್ದಾರೆ. ದೀಪಾಲಿ ಅವರು ಇತ್ತೀಚೆಗೆ ಹತ್ಯೆಯಾದ ಸಚಿವ ನಬಕಿಶೋರ್‌ ದಾಸ್‌ ಅವರ ಪತ್ನಿ. ಜಲಂಧರ್‌ ಲೋಕಸಭೆ ಉಪಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌ನ ಕರ್ಮಜಿತ್‌ ಕೌರ್‌ ಅವರನ್ನು ರಾಜ್ಯದ ಆಡಳಿತಾರೂಢ ಆಪ್‌ ಅಭ್ಯರ್ಥಿ ಸುಶೀಲ್‌ ರಿಂಕು ಸುಮಾರು 48 ಸಾವಿರ ಅಂತರದಿಂದ ಮಣಿಸಿದ್ದಾರೆ.

ಉತ್ತರ ಪ್ರದೇಶದ ಮಾಜಿ ಸಚಿವ ಆಜಂ ಖಾನ್‌ ಅವರ ಭದ್ರಕೋಟೆ ಸುರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಅಪ್ನಾದಳ ಅಭ್ಯರ್ಥಿ ಶಫೀಕ್‌ ಅಹ್ಮದ್‌ ಅನ್ಸಾರಿ ಅವರು ಎಸ್‌ಪಿ ಅಭ್ಯರ್ಥಿಯನ್ನು 8 ಸಾವಿರ ಮತದಿಂದ ಮಣಿಸಿದ್ದಾರೆ. ಛಾನ್‌ಬೇ (ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕೃತಿ ಕೋಲ್‌ ಅವರನ್ನು ಅಪ್ನಾದಳ ಅಭ್ಯರ್ಥಿ ರಿಂಕಿ ಕೋಲ್‌ ಸೋಲಿಸಿದ್ದಾರೆ.

ಮೇಘಾಲಯದ ಸೋಹಿಯಾಂಗ್‌ ವಿಧಾನಸಭೆ ಕ್ಷೇತ್ರದಲ್ಲಿ ವಿಪಕ್ಷ ಯುಡಿಪಿಯ ಶಿಂಶಾರ್‌ ಕೂಪರ್‌ ರಾಯ್‌ ಅವರು ಆಡಳಿತಾರೂಢ ಎನ್‌ಪಿಪಿ ಅಭ್ಯರ್ಥಿಯನ್ನು 3400 ಮತದಿಂದ ಮಣಿಸಿದ್ದಾರೆ.

Recent Articles

spot_img

Related Stories

Share via
Copy link