ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನಗುಂಡಿಯಲ್ಲಿ ಇನ್ನರ್ ವೀಲ್ ಕ್ಲಬ್ ಬೆಂಗಳೂರು ಎಚ್ ಬಿ ಆರ್ ವತಿಯಿಂದ ಶಾಲೆಗೆ ಒಂದು TV ˌ 4 ಫ್ಯಾನ್ ಗಳನ್ನು ಕೊಡುಗೆ

ಜಮಖಂಡಿ : 19 ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನಗುಂಡಿಯಲ್ಲಿ ಇನ್ನರ್ ವೀಲ್ ಕ್ಲಬ್ ಬೆಂಗಳೂರು ಎಚ್ ಬಿ ಆರ್ ವತಿಯಿಂದ ಶಾಲೆಗೆ ಒಂದು TV ˌ 4 ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಚನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಶಂಕರ್ ಕಾಂಬಳೆ ಅವರು ವಹಿಸಿದ್ದರು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶ್ರೀ ಜಿ ಎನ್ ಕುಂಬಾರ್ ಅವರು ಸರ್ವಜ್ಞನ ವಚನದ ಮೂಲಕ ದಾನದ ಮಹತ್ವವನ್ನು ವಿವರಿಸಿ ಇನ್ನರ್ ವೀಲ್ ಕ್ಲಬ್ ನ ಈ ಸೇವಾ ಕಾರ್ಯ ಶ್ಲಾಘನೀಯವಾದದ್ದು ಎಂದರು. ಇನ್ನರ್ ವೀಲ್ ನ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಹೆಚ್. ಬಿ. ಆರ್. ಸಂಸ್ಥೆಯಿಂದ ಆಗಮಿಸಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಇನ್ನರ್ ವೀಲ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವೀಣಾ ನಾವು ಈ ಸಂಸ್ಥೆಯ ವತಿಯಿಂದ ಸಣ್ಣ ಪುಟ್ಟ ಸಹಾಯಗಳನ್ನು ಮಾಡುತ್ತಾ ಬರುತ್ತಿದ್ದೇವೆ ಕಳೆದ ಸಾರಿ ಈ ಶಾಲೆಗೆ ಬಂದಾಗ ನಲಿಕಲಿ ಟೇಬಲ್ ˌ ಕುರ್ಚಿಗಳನ್ನು ನೀಡಿದ್ದೇವು ಈ ಸಲ ನಮ್ಮ ಹಾಗೂ ಶಾಲೆಯ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿರುವ ಶ್ರೀ ಪರಮಾನಂದ ಶಿಕ್ಷಕರ ಮನವಿಯ ಮೇರೆಗೆ ಒಂದು TV ಹಾಗೂ 4 ಫ್ಯಾನ್ ಗಳನ್ನು ನೀಡುತ್ತಿರುವುದು ಖುಷಿಯ ವಿಚಾರ ಎಂದರು.

ನಂತರ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಸುಧಾ ಅವರು ಈ ಸೇವೆಯನ್ನು ಇಲ್ಲಿ ಮಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು ನಂತರ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ರಿಶಿಕ ಅವರು ನಾವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಶಂಕರ ಕಾಂಬಳೆ ಅವರು ಈ ಸಂಸ್ಥೆಯ ಸೇವಾ ಕಾರ್ಯ ಯಾವಾಗಲೂ ಸ್ಮರಣೀಯವಾದದ್ದು ನಾವು ಗ್ರಾಮ್ ಪಂಚಾಯಿತಿಯಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸಿದ್ದು ಮುಂದಿನ ದಿನಗಳಲ್ಲಿ ಶಾಲೆಗೆ ಹೈಟೆಕ್ ಗ್ರಂಥಾಲಯ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮನ್ನು ಶ್ರೀ D K ಅಮರಿ ನಿರೂಪಿಸಿದರು ಶ್ರೀ ಪರಮಾನಂದ ಸ್ವಾಗತಿಸಿದರು ಶ್ರೀಮತಿ ಸಿದ್ಧಗಂಗು ವಂದಿಸಿದರು.

ಶಾಲೆಯ SDMC ಅಧ್ಯಕ್ಷರಾದ ಶ್ರೀ ಚಿಕ್ಕಯ್ಯ ಕಾಂಬಳೆ ˌ ಗ್ರಾ ಪಂ ಸದಸ್ಯರಾದ ರಾಮಣ್ಣ ಕಳ್ಯಾಡ್ರ ˌ SDMC ಸದಸ್ಯರಾದ ರಮೇಶ ಕಾಂಬಳೆ ˌˌರಾಮಪ್ಪ ಗುರವ ˌ ಮಾಜಿ SDMC ಸದಸ್ಯರಾದ ಶ್ರೀಶೈಲ್ ಮಠಪತಿ ˌಅಲ್ಲಾಸಾಬ್ ಪಿಂಜಾರ ಹಾಗೂ ಶಾಲೆಯ ಎಲ್ಲಾ ಗುರುಗಳು ಗುರುಮಾತೆಯರು ಉಪಸ್ಥಿತರಿದ್ದರು.

ನನಗೆ ಬರುವ ಗೌರವದನವನ್ನು ನನ್ನ ಪಂಚಾಯತಿ ವ್ಯಾಪ್ತಿಯಲ್ಲಿ ತಂದೆ ತಾಯಿ ಇಲ್ಲದ ಸರಕಾರಿ ಶಾಲಾ ಮಕ್ಕಳಿಗೆ ನೀಡುತ್ತೇನೆ

ಶ್ರೀ ಶಂಕರ ಕಾಂಬಳೆ
ಗ್ರಾ ಪಂ ಅಧ್ಯಕ್ಷರು ಕುಂಚನೂರು

ನಮ್ಮ ಶಾಲೆಯಲ್ಲಿ ಕಲಿಕಾ ವಾತಾರಣ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇವೆ.

ಶ್ರೀ ಚಿಕ್ಕಯ್ಯ ಕಾಂಬಳೆ
SDMC ಅಧ್ಯಕ್ಷರು ಚಿನಗುಂಡಿ

Recent Articles

spot_img

Related Stories

Share via
Copy link