ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಮೋದಿ ಹೀಗಂದ್ರಾ!

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಸೇರಿ ಪ್ರಧಾನಿ ಮೋದಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ವಿರುದ್ಧ ಮಾಡಿಕೊಂಡಿರುವ ಮಹಾಘಟಬಂಧನಕ್ಕೆ INDIA ಎಂದು ಹೆಸರಿಡಲಾಗಿದೆ. ಈ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಒಕ್ಕೂಟವನ್ನು ಪ್ರಧಾನಿ ಮೋದಿ ಅವರು ವ್ಯಂಗ್ಯವಾಡಿದ್ದಾರೆ.

ಮುಜಾಹಿದ್ದೀನ್ ಉಗ್ರ ಸಂಘಟನೆಯ ಹೆಸರಿನಲ್ಲೂ ಇಂಡಿಯಾ ಇದೆ. ಸ್ವಾತಂತ್ರ್ಯಕ್ಕೂ ಮುನ್ನ ಭಾರತವನ್ನು ಲೂಟಿ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿಯೂ ಇಂಡಿಯಾ ಎಂಬುದಿದೆ. ಹಾಗಾಗಿ ಇಂಡಿಯಾ ಎಂಬುದಾಗಿ ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಹೆಸರಿರಿಸಿದ ಕೂಡಲೇ ಅದು ಭಾರತವಾಗಲಾರದು. ವಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ಈ ತಂತ್ರವನ್ನು ಅನುಸರಿಸುತ್ತಿವೆಯಷ್ಟೇ ಎಂದು ಹೇಳಿದ್ದಾರೆ.

ಯಾವುದೇ ನಿರ್ದೇಶನ ಇಲ್ಲದೆಯೇ ವಿರೋಧ ಪಕ್ಷಗಳ ಈ ಒಕ್ಕೂಟ ಸಾಗುತ್ತಿದೆ. ಇಂಡಿಯಾ ಎಂಬುದಾಗಿ ಹೆಸರನ್ನಿರಿಸಿಕೊಂಡು ಜನಸಾಮಾನ್ಯರನ್ನು ತಲುಪುವ ಪ್ರಯತ್ನ ವಿರೋಧ ಪಕ್ಷಗಳ ಮಹಾಘಟಬಂಧನ್ ಒಕ್ಕೂಟ ಮಾಡುತ್ತಿದೆ. ಆ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

ವಿರೋಧ ಪಕ್ಷಗಳು ಸೋಲು, ಹತಾಶೆ, ದಣಿವು ಮೊದಲಾದವುಗಳಿಂದ ಕಂಗೆಟ್ಟಿದ್ದಾರೆ. ಪ್ರಧಾನಿ ಮೋದಿ ಅವರನ್ನು ವಿರೋಧ ಮಾಡುವುದನ್ನೇ ಮುಖ್ಯ ಅಜೆಂಡಾವನ್ನಾಗಿಸಿಕೊಂಡು ವಿರೋಧಿ ಪಡೆಯನ್ನು ರಚಿಸಿದ್ದಾರೆ. ಅವರೆಲ್ಲರೂ ವಿರೋಧ ಪಕ್ಷಗಳಾಗಿಯೇ ಉಳಿಯುವುದಕ್ಕೆ ನಿರ್ಧಾರ ಮಾಡಿದಂತಿದೆ. ಮುಂದಿನ ೨೦೨೪ ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಈ ಹಿಂದೆ ಪಾಟ್ನಾ ದಲ್ಲಿ, ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳ ವಿರುದ್ಧ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಹಾಘಟಬಂಧನ ಸಭೆ ನಡೆಸಿ, ಮುಂದಿನ ಚುನಾವಣೆಯಲ್ಲಿ ಜನರನ್ನು ಮರುಳು ಮಾಡಿ ಹೇಗೆ ಎನ್‌ಡಿಎ ಯನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಣಿಸಬಹುದು ‌ಎಂಬುದಾಗಿ ಚರ್ಚೆ ನಡೆಸಿದ್ದವು. ಹಾಗೆಯೇ ಈ ವಿಪಕ್ಷಗಳ‌ ಒಕ್ಕೂಟದ ಮುಂದಿನ ಸಭೆಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಸುವುದಕ್ಕೂ ತೀರ್ಮಾನ ಕೈಗೊಳ್ಳಲಾಗಿತ್ತು.

ಇದೀಗ ವಿಪಕ್ಷಗಳ ಮಹಾಘಟಬಂಧನದ ವಿರುದ್ಧ ಪ್ರಧಾನಿ ಮೋದಿ ಅವರೂ ವಾಗ್ದಾಳಿ ನಡೆಸಿದ್ದು, ಆ ಮೂಲಕ ವಿಪಕ್ಷಗಳ ಈ ಒಕ್ಕೂಟ ದೇಶವನ್ನು, ಜನರನ್ನು ತಪ್ಪುದಾರಿಗೆಳೆದು, ಕೊಳ್ಳೆ ಹೊಡೆಯುವ ಯತ್ನವಾಗಿದೆ. ಇವರ ಈ ನಿಲುವುಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ‌ಗೆ ಸುಲಭ ದರದಲ್ಲಿ ಗೆಲುವು ಸಾಧಿಸಲು ಅವಕಾಶ‌ ಮಾಡಿ ಕೊಡಲಿದೆ ಎಂಬ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link