ವಿಜಯಪುರ: ಭೀಮಾ ತೀರದಲ್ಲಿ ಮತ್ತೇ ಶುರುವಾಯ್ತು ಗನ್‌ದಂಧೆ!

Bheema Theera Gun Smuggling: ವಿಜಯಪುರ ಅಂದಾಕ್ಷಣ ತಟ್ಟಂತ ನೆನಪಾಗೋದು ಭೀಮಾತೀರದ ಪಾತಕ ಲೋಕ ಜೊತೆಗೆ ಗುಂಡಿನ ಸದ್ದು. ಶಾಂತವಾಯ್ತು ಅನ್ನೋವಾಗ ಮತ್ತೆ ವಿಜಯಪುರದಲ್ಲಿ ಗನ್‌ ಹಾವಳಿ ಶುರುವಾಗಿದೆ. ಚುನಾವಣೆ ಹೊಸ್ತಿಲಲ್ಲೆ ಇರೋವಾಗ ಪಡ್ಡೆ ಹುಡುಗರ ಕೈಲಿ ಸಿಕ್ಕ ಕಂಟ್ರಿಮೆಡ್‌ಪಿಸ್ತೂಲು ಆತಂಕ ಹುಟ್ಟಿಸಿದೆ.

ಈ ಗನ್‌ ದಂಧೆ ಅಂದ್ರೆ ಅದೇನು ಬದನೆಕಾಯಿ ಮಾರಿದ ಹಾಗೆ ಅಲ್ಲ. ಕಂಟ್ರಿ ಪಿಸ್ತೂಲು ದಂಧೆಯ ಆಳ-ಅಗಲ ಸಣ್ಣದಲ್ಲ. ಈ ದಂಧೆ ನಡೆಯೋ ಪರಿಯನ್ನ ಕೇಳಿದ್ರೆ ನೀವೆ ಸ್ಟನ್‌ ಆಗ್ತೀರಿ. ಸಾಕಷ್ಟು ರಿಸ್ಕ್‌ ಮಧ್ಯೆಯು ಗನ್‌ ಡೀಲರ್‌ಗಳು ನಡೆಸೋ ವಹಿವಾಟು ಕಂಡು ಪೊಲೀಸರೆ ಹೌಹಾರಿದ್ದಾರೆ. ಗನ್‌ದಂಧೆಯ ಎಕ್ಸಕ್ಲೂಜಿವ್‌ ಮಾಹಿತಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಬಳಿ ಇದೆ. ಯಾವಾಗ ಅನುಮಾನಾಸ್ಪದವಾಗಿ ಕಂಡವರನ್ನ ಎತ್ತಾಕೊಂಡು ಬಂದು ಪೊಲೀಸರು ವರ್ಕೌಟ್ ಮಾಡಿದ್ರೋ ಅವರ ಬಳಿ ಇದ್ದ ಪಿಸ್ತೂಲ್ ಕಥೆಯನ್ನೆಲ್ಲಾ ಹೇಳಿಬಿಟ್ರು. ಈ ಮೂಲಕ ಮಧ್ಯಪ್ರದೇಶದ ಗನ್‌ದಂಧೆ ಭೀಮಾತೀರದ ವರೆಗು ಹೆಗೆ ಹರಡಿಕೊಂಡಿದೆ ಅನ್ನೋ ಮಾಹಿತಿಯನ್ನ ಪೊಲೀಸರು ಕಲೆಹಾಕಿದ್ದಾರೆ. ಅಷ್ಟಕ್ಕು ಹೇಗೆ ತಯಾರಾಗುತ್ವೆ ಈ ಪಿಸ್ತೂಲು ಅಲ್ಲಿಂದ ವಿಜಯಪುರಕ್ಕೆ ಹೇಗೆ ಸಪ್ಲೈ ಆಗುತ್ವೆ ಗನ್‌.

ಮಧ್ಯಪ್ರದೇಶದಿಂದ ಭೀಮಾತೀರದ ವರೆಗು ಹರಡಿರುವ ಈ ಗನ್‌ ದಂಧೆಯ ಕಥೆಯನ್ನ ಎಷ್ಟು ಹೇಳಿದ್ರು ಕಡಿಮೆನೆ. ವಿಜಯಪುರದಲ್ಲಿ ಮತ್ತೆ ಶುರುವಾಗಿರೋ ಈ ಗನ್‌ ದಂಧೆಯನ್ನ ಬುಡ ಸಮೇತ ಕಿತ್ತು ಹಾಕೋದಕ್ಕೆ ಡೇರಿಂಗ್‌ ಆಫೀಸರ್ಸ್‌ ಮಧ್ಯಪ್ರದೇಶಕ್ಕೆ ಹೋಗಿದ್ರು. ತಮ್ಮ ಪ್ರಾಣವನ್ನೆ ಒತ್ತೆ ಇಟ್ಟು ಕರ್ನಾಟಕಕ್ಕೆ ಗನ್‌ ಸಪ್ಲೈ ಮಾಡ್ತಿದ್ದ ಡೀಲರ್‌ಗಳನ್ನ ಎಳೆದು ತಂದಿದ್ರು. ಆ ರಣರೋಚಕ ಕಾರ್ಯಾಚರಣೆ ಬಗ್ಗೆ ಹೇಳದೇ ಇದ್ರೆ ಮಜಾನೇ ಇರೋದಿಲ್ಲ. ಇದಾದ ಬಳಿಕ ಇಲ್ಲಿಯವರೆಗೆ ವಿಜಯಪುರದಲ್ಲಿ ಗನ್‌ ದಂಧೆಗೆ ಬ್ರೇಕ್‌ ಬಿದ್ದಿತ್ತು. ಮತ್ತೆ ಈಗ ಚುನಾವಣೆ ಹೊಸ್ತಿಲಲ್ಲಿ ಕಂಟ್ರಿ ಪಿಸ್ತೂಲ್‌ ಹಾವಳಿ ಶುರುವಾಗಿದೆ. ದಂಧೆಯ ಬುಡಕ್ಕೆ ಬೆಂಕಿ ಇಡೋಕೆ ವಿಜಯಪುರದ ಖಾಕಿಂ ಟೀಂ ರೆಡಿಯಾಗಿದೆ. ಆರಂಭಿಕವಾಗಿ ಯಾವುದೇ ಬಾಲ್‌ವೇಸ್ಟ್‌ ಆಗದಂತೆ ಮೂರು ಗ್ಯಾಂಗ್‌ಗಳ ವಿಕೆಟ್‌ ಕೆಡವಿ, ೫ ಗನ್‌ಗಳನ್ನ ವಶಕ್ಕೆ ಪಡೆದಿದೆ. ಗನ್‌ ದಂಧೆಯ ಮತ್ತಷ್ಟು ಮಾಹಿತಿ ಸಿಕ್ಕಿದ್ದು ಪೊಲೀಸರು ಇಷ್ಟರಲ್ಲೆ ಮತ್ತಷ್ಟು ಗ್ಯಾಂಗ್‌ಗಳನ್ನ ಬಂಧಿಸುವ ಸಾಧ್ಯತೆಯಿದೆ.

Recent Articles

spot_img

Related Stories

Share via
Copy link