ಬೆಂಗಳೂರಿನಲ್ಲಿ ಸೂಸೈಡ್ ಬಾಂಬರ್ ಸೇರಿ 5 ಉಗ್ರರ ಬಂಧನ

ಬೆಂಗಳೂರು ಎಂಬ ಮಹಾನಗರಿಯಲ್ಲಿಯೂ ದಿನದಿಂದ ದಿನಕ್ಕೆ ಭಯೋತ್ಪಾದಕರ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತಿರುವಂತಿದೆ. ಉಗ್ರರ ಜೊತೆಗೆ ನಂಟು ಹೊಂದಿರುವವರ ಪ್ರಕರಣಗಳು ಬಯಲಾಗುವುದು ಈಗ ಬೆಂಗಳೂರಿನಲ್ಲಿಯೂ ಸಾಮಾನ್ಯ ಎಂಬತಾಗಿದ್ದು, ಇದು ಭವಿಷ್ಯದ ಅಪಾಯಗಳ ಮುನ್ಸೂಚನೆ ಎಂದರೂ ತಪ್ಪಾಗಲಾರದೇನೋ.

ಬೆಂಗಳೂರಿನಲ್ಲಿ ಸಿಬಿಐ ಪೊಲೀಸರು ಐವರು ಶಂಕಿತ ಉಗ್ರರನ್ನು ‌ವಶಕ್ಕೆ ಪಡೆದುಕೊಂಡಿದ್ದು, ಬಂಧಿತರು ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ವಿದ್ವಂಸಕ ಕೃತ್ಯಗಳನ್ನು ‌ನಡೆಸಲು ಸಂಚು ಹೂಡಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಬಂಧಿತ ಭಯೋತ್ಪಾದಕರನ್ನು ಶಾಂತಿದೂತರ ‌ಸಮುದಾಯದ ಸಯ್ಯದ್ ಸುಹೇಲ್, ಉಮರ್, ಜುನೈದ್ ಮುದಾಶಿರ್, ಜಾಹಿದ್ ಎಂದು ಗುರುತಿಸಲಾಗಿದೆ.

ಈ ಎಲ್ಲಾ ಉಗ್ರರು ತಾವು ಸಂಚು ರೂಪಿಸಿದ್ದ ವಿದ್ವಂಸಕ ಘಟನೆ ನಡೆಸುವ ನಿಟ್ಟಿನಲ್ಲಿ ಅದಕ್ಕೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಸಿಬಿಐ ಪೊಲೀಸರು ಕಂಡುಕೊಂಡಿದ್ದಾರೆ. ಈ ಎಲ್ಲಾ ಭಯೋತ್ಪಾದಕರು ಕಿಡ್ನಾಪ್, ಹತ್ಯೆ ಪ್ರಕರಣಗಳಲ್ಲಿ ಭಾಗವಹಿಸಿ‌ ಸದ್ಯ ಜೈಲಿನಲ್ಲಿರುವ ಆರೋಪಿಗಳ ಜೊತೆಗೆ ಸಂಬಂಧ ಹೊಂದಿದ್ದಾಗಿಯೂ ತನಿಖೆಯಲ್ಲಿ ಬಯಲಾಗಿದೆ. ಜೊತೆಗೆ ಆತಂಕಕಾರಿ ಎಂಬಂತೆ, ಪರಪ್ಪನ ಅಗ್ರಹಾರದಲ್ಲಿರುವ ಉಗ್ರವಾದಿಗಳ ಜೊತೆಗೂ ಇವರಿಗೆ ಸಂಬಂಧ ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಆತಂಕಕಾರಿ ‌ಸಂಗತಿಗಳು ಬಯಲಾಗಿದ್ದು, ಈ ಅವರಲ್ಲಿ ಓರ್ವ ಭಯೋತ್ಪಾದಕ ಸೂಸೈಡ್ ಬಾಂಬರ್ ಎಂಬ ಅಂಶವೂ ಬಯಲಾಗಿದೆ. ಈ ಭಯೋತ್ಪಾದಕರ ಬಳಿ 36 HE ಮಾದರಿಯ ಗ್ರೆನೇಡ್‌ಗಳನ್ನು ಸಹ ಪತ್ತೆ ಮಾಡಲಾಗಿದೆ.‌ ಸೂಸೈಡ್ ಬಾಂಬರ್ ಉಗ್ರ ತನ್ನನ್ನು ತಾನೇ ಸ್ಪೋಟಿಸಿಕೊಳ್ಳಲು ತಯಾರಾಗಿದ್ದು, ಈತನಿಗಾಗಿ ಉಳಿದ ಬಂಧಿತ ಉಗ್ರರು ಗ್ರೆನೇಡ್‌ಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕರಿಂದ ಏಳು ಸೆಕುಂಡ್‌ಗಳಲ್ಲಿ ಸ್ಪೋಟವಾಗುವಂತಹ ಗ್ರೆನೇಡ್‌ಗಳನ್ನು ಸಹ ಈ ಉಗ್ರರು ಹೊಂದಿದ್ದರು. ಇವರನ್ನು ಡಿಜೆ ಹಳ್ಳಿ ಬಳಿ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕದ ಮಂಗಳೂರಿನಲ್ಲಿ ಈ ಹಿಂದೆ ಭಯೋತ್ಪಾದಕ ಶಾರಿಕ್ ನಡೆಸಿದ್ದ ಕುಕ್ಕರ್ ಬಾಂಬ್ ಸ್ಪೋಟ, ಆ ಬಳಿಕ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ಉಗ್ರ ನಂಟು ಹೊಂದಿದ್ದನ್ನು ಬೇಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಅವರೆಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಉಗ್ರ ಶಾರಿಕ್‌ನನ್ನು ಭಯೋತ್ಪಾದಕ ಎಂದು ಹೇಳಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಕೆರಳಿ ‌ಕೆಂಡಾಮಂಡಲವಾಗಿದ್ದರು. ಹಾಗೆಯೇ ಶಿವಮೊಗ್ಗ ಸಮೀಪ ಬಂಧಿಸಲಾದ ಉಗ್ರರ ನಂಟು ಹೊಂದಿದ್ದ ಬಂಧಿತ ಯುವಕ ಸ್ಥಳೀಯ ಕಾಂಗ್ರೆಸ್ ನಾಯಕನೊಬ್ಬನ ಪುತ್ರ ಎಂಬುದು ಗಮನಿಸಬೇಕಾದ ವಿಷಯ.

ಅದೇ ರೀತಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಬೆಂಗಳೂರು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿಯೂ ಶಾಂತಿ ದೂತ ಸಮುದಾಯದವರು ನಡೆಸಿದ ವಿದ್ವಂಸಕ ಕೃತ್ಯದ ಬಗ್ಗೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕ್ರಮ ಹೇಳಿಕೊಳ್ಳುವಂತದ್ದೇನೂ ಇಲ್ಲ ಎಂಬುದು ನೋವಿನ ವಿಚಾರ. ಇದೀಗ ಮತ್ತೆ ಕಾಂಗ್ರೆಸ್ ಅವಧಿಯಲ್ಲಿಯೇ ಬೆಂಗಳೂರಿನಲ್ಲಿ ಸೂಸೈಡ್ ಬಾಂಬರ್ ಸೇರಿದಂತೆ ಐವರು ಉಗ್ರರು ಸಿಬಿಐ ಬಲೆಗೆ ಬಿದ್ದಿದ್ದು, ರಾಜ್ಯದಲ್ಲಿ ಉಗ್ರ ದಮನಕ್ಕಾಗಿ ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳುವುದೇ ಎಂಬುದು ಸದ್ಯದ ಪ್ರಶ್ನೆ.

Recent Articles

spot_img

Related Stories

Share via
Copy link