ರಾಜನಾಥ್‌ ಸಿಂಗ್‌ – ದೇಶದ ನಾಗರಿಕರು ಸೈನಿಕರ ಜತೆ ಯುದ್ಧಕ್ಕೆ ಕೈಜೋಡಿಸಿದ್ರೆ ಪಿಒಕೆಗೆ ಭಾರತ ಲಗ್ಗೆ

ನವದೆಹಲಿ (ಜುಲೈ 26, 2023): ಕಾರ್ಗಿಲ್‌ ವಿಜಯ್‌ ದಿವಸ್‌ 24ನೇ ವಾರ್ಷಿಕೋತ್ಸವದ ದಿನ ರಾಜನಾಥ್‌ ಸಿಂಗ್ ಎಲ್‌ಒಸಿ ಗಡಿ ದಾಟುವ ಬಗ್ಗೆ ಪ್ರಮುಖವಾದ ಹೇಳಿಕೆ ನೀಡಿದ್ದಾರೆ. ಭಾರತವು ತನ್ನ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳಲು ಎಲ್‌ಒಸಿ ದಾಟಲು ಸಿದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸೈನಿಕರನ್ನು ಬೆಂಬಲಿಸಲು ನಾಗರಿಕರು ಸಿದ್ಧರಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಕರೆ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಉದಾಹರಣೆಯನ್ನು ಉಲ್ಲೇಖಿಸಿದ ರಾಜನಾಥ್‌ ಸಿಂಗ್, ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಯುದ್ಧ ನಡೆಯುತ್ತಿದೆ. ಏಕೆಂದರೆ ನಾಗರಿಕರು ಯುದ್ಧದಲ್ಲಿ ಭಾಗವಹಿಸುತ್ತಿದ್ದಾರೆ ಎಂದೂ ಹೇಳಿದರು. 24ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ದ್ರಾಸ್‌ನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ರಾಜನಾಥ್ ಸಿಂಗ್ ಈ ಮಾತನಾಡಿದ್ದಾರೆ. 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪನಮನ ಸಲ್ಲಿಸಿ ಸ್ಮಾರಕಕ್ಕೆ ನಮನವನ್ನೂ ಸಲ್ಲಿಸಿದರು.

Tweet

See new Tweets

Conversation

Rajnath Singh
@rajnathsingh
Paid tributes to India’s bravehearts at Kargil War Memorial in Dras. The Indian Armed Forces fought valiantly and many soldiers laid down their lives in the line of duty. The nation will remain indebted to their service and sacrifice.

Image

Image

60K

Views

ಕಾರ್ಗಿಲ್ ಯುದ್ಧವನ್ನು ಭಾರತದ ಮೇಲೆ ಹೇರಲಾಗಿತ್ತು ಎಂದೂ ರಾಜನಾಥ್ ಸಿಂಗ್ ಹೇಳಿದ್ದಾರೆ. ‘’ಪಾಕಿಸ್ತಾನದವರು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ.. ಯುದ್ಧವನ್ನು ಭಾರತದ ಮೇಲೆ ಹೇರಲಾಯಿತು. ದೇಶಕ್ಕೆ ಮೊದಲ ಸ್ಥಾನ ನೀಡಿ ಮತ್ತು ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುತ್ರರಿಗೆ ನಾನು ನಮಸ್ಕರಿಸುತ್ತೇನೆ” ಎಂದೂ ಅವರು ತಿಳಿಸಿದ್ದಾರೆ.

ಅಲ್ಲದೆ, “ಯುದ್ಧದ ಸಂದರ್ಭ ಬಂದಾಗಲೆಲ್ಲಾ ನಮ್ಮ ಸಾರ್ವಜನಿಕರು ಯಾವಾಗಲೂ ಪಡೆಗಳನ್ನು ಬೆಂಬಲಿಸುತ್ತಾರೆ. ಆದರೆ ಆ ಬೆಂಬಲವು ಪರೋಕ್ಷವಾಗಿದೆ, ಅಗತ್ಯವಿದ್ದಲ್ಲಿ ಯುದ್ಧಭೂಮಿಯಲ್ಲಿ ನೇರವಾಗಿ ಸೈನಿಕರನ್ನು ಬೆಂಬಲಿಸಲು ಸಾರ್ವಜನಿಕರು ಸಿದ್ಧರಾಗಿರಬೇಕು” ಎಂದೂ ಸಚಿವರು ಹೇಳಿದರು. “ದೇಶದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳಲು ನಾವು ಯಾವುದೇ ತೀವ್ರತೆಗೆ ಹೋಗಬಹುದು.. ಅದು ಎಲ್ಒಸಿ ದಾಟುವುದನ್ನೂ ಒಳಗೊಂಡಿದ್ದರೆ, ನಾವು ಅದನ್ನು ಮಾಡಲು ಸಿದ್ಧರಿದ್ದೇವೆ” ಎಂದೂ ಅವರು ಹೇಳಿದರು.

ಹಾಗೂ, “ಯುದ್ಧ ಕೇವಲ ಎರಡು ದೇಶಗಳ ಸೇನೆಗಳ ನಡುವೆ ಅಲ್ಲ, ಎರಡು ರಾಷ್ಟ್ರಗಳ ನಡುವೆ.. 26 ಜುಲೈ 1999 ರಂದು ಯುದ್ಧವನ್ನು ಗೆದ್ದ ನಂತರವೂ, ನಮ್ಮ ಪಡೆಗಳು ಎಲ್ಒಸಿ ದಾಟಿಲ್ಲ ಅಂದರೆ ನಾವು ಶಾಂತಿಪ್ರಿಯರಾಗಿರುವುದರಿಂದ ಮಾತ್ರ ಇದು ಸಾಧ್ಯ. ನಾವು ಭಾರತೀಯ ಮೌಲ್ಯಗಳನ್ನು ನಂಬುತ್ತೇವೆ, ಮತ್ತು ನಾವು ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧತೆಯನ್ನು ಹೊಂದಿದ್ದೇವೆ. ಆ ಸಮಯದಲ್ಲಿ ನಾವು ಎಲ್ಒಸಿ ದಾಟದಿದ್ದರೆ ನಾವು ಎಲ್ಒಸಿ ದಾಟಲು ಸಾಧ್ಯವಿಲ್ಲ ಎಂದರ್ಥವಲ್ಲ. ನಾವು ಎಲ್ಒಸಿ ದಾಟುತ್ತೇವೆ, ಎಲ್ಒಸಿ ದಾಟಬಹುದು ಮತ್ತು ಅಗತ್ಯವಿದ್ದರೆ ಭವಿಷ್ಯದಲ್ಲಿ ಎಲ್ಒಸಿ ದಾಟಬಹುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ’’ ಎಂದೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೇಳಿದ್ದಾರೆ.

ANI
@ANI
#WATCH | Ladakh: Defence Minister Rajnath Singh says, “A war is not just between two armies but between two nations…Even after winning the war on 26 July 1999, if our forces did not cross the LoC, it is only because we are peace-loving, we believe in Indian values, and we have… Show more

Watch on Twitter
281
Reply
Share
1999 ರಲ್ಲಿ ಲಡಾಖ್‌ನಲ್ಲಿ ರಹಸ್ಯವಾಗಿ ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಯು ಪ್ರತಿದಾಳಿ ನಡೆಸಿತ್ತು. ಕಾರ್ಗಿಲ್ ವಿಜಯ್ ದಿವಸ್ ಅನ್ನು ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಗುರುತಿಸಲು ಆಚರಿಸಲಾಗುತ್ತದೆ.

Recent Articles

spot_img

Related Stories

Share via
Copy link