
ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ ಹಿಂಬಾಗದಲ್ಲಿ ಪವಿತ್ರ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಶನಿವಾರ ಎಂ ಆರ್ ಎನ್ ನಿರಾಣಿ ಪೌಂಡೇಶನ ಹಾಗೂ ರೈತರ ಆಶ್ರಯದಲ್ಲಿ ಏರ್ಪಡಿಸಿರುವ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಹಾಗೂ ಮುರಗೇಶ ನಿರಾಣಿಯವರ 60ನೇ ಹುಟ್ಟು ಹಬ್ಬದ ನಿಮಿತ್ತ ಕೃಷ್ಣಾ ಪುಣ್ಯ ಸ್ನಾನ, ಕೃಷ್ಣಾ ಆರತಿ, ಪಲ್ಲಕ್ಕಿ ಉತ್ಸವ, ಸಾಗಾ ಸಾಧುಗಳ ಪಾಲ್ಗೊಂಡು ವಿಶೇಷವಾಗಿ ಆಚರಣೆ ಮಾಡಿದರು.
ಹಿಪ್ಪರಗಿ ಬ್ಯಾರೆಜ್ ಹಾಗೂ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ನದಿಯ ಸುತ್ತಲು ವಿವಿಧ ಬಣ್ಣಗಳ ಚಿತ್ತಾರ ಬಿತ್ತರವಾಗಿವಂತೆ ದೀಪಾಲಂಕಾರ ಎಲ್ಲರ ಕಣ್ಮನ ಸೇಳೆದವು. ವಿವಿಧ ಬಣ್ಣಗಳ ಪಟಾಕಿ ಹಚ್ಚುವ ಮೂಲಕ ಆಗಸದಲ್ಲಿ ಮಿಂಚಿನಂತೆ ಕಂಗೊಳಿಸಿವದು, ಮುಂದೆ ಆರತಿ ಹಿಂದೆ ಭರತನಾಟ್ಯ ಎಲ್ಲರನ್ನು ಬೆರಗು ಗೊಳಿಸಿದವು.

ಕೃಷ್ಣಾಆರತಿ ನಿಮಿತ್ತ ಕೃಷ್ಣಾ ನದಿ ತೀರದ ಹಿಪ್ಪರಗಿ ಜಲಾಶಯದ ಬಳಿ ಸಂಭ್ರಮ ಮನೆ ಮಾಡಿತ್ತು, ಎಲ್ಲೆಡೆ ಜಯಘೋಷಗಳು ಮುಳುಗಿದ್ದವು, ರೈತರು ಭಕ್ತ ಭಾವದಿಂದ ಪೂಜೆಯಲ್ಲಿ ಪಾಲ್ಗೊಂಡು ತಾಯಿ ಕೃಷ್ಣೆಗೆ ನಮಿಸಿದರು. ಕೃಷ್ಣಾರತಿ ಪ್ರಾರಂಭವಾಗುತ್ತಿದ್ದಂತೆ ವಿವಿಧ ಮಂತ್ರಗಳನ್ನು ಹೇಳುವ ಮೂಲಕ ಗಂಟೆಯ ನಾದ ಹಾಗೂ ಶಂಕವನ್ನು ಊದುವ ಮೂಲಕ ಕೃಷ್ಣಾರತಿ ಪ್ರಾರಂಭ ಮಾಡಿದರು.

ಕಂಕಣವಾಡಿ, ಮೈಗೂರ, ಮುತ್ತೂರ ಗ್ರಾಮದಿಂದ ತರಿಸಿರುವ ಐದು ಬೋಟ್ನಲ್ಲಿ ಶ್ರೀಗಳು, ಪಂಡಿತರು, ಅರ್ಚಕರು, ಮುತೈದೆಯರು ಹಾಗೂ ಗಣ್ಯರ ನೇತೃತ್ವದಲ್ಲಿ ಎಂ.ಆರ್ ಎನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ನದಿಯಲ್ಲಿ ಹೋಗಿ ಪೂರ್ವಾಭಿಮುಖವಾಗಿ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ವಿವಿಧ ಗ್ರಾಮಳಿಂದ ಮಹಿಳೆಯರು ಆರತಿಯೊಂದಿಗೆ ಆಗಮಿಸಿ ನದಿಗೆ ಆರತಿ ಮಾಡಿ ಪರಸ್ಪರ ಉಡಿ ತುಂಬಿಕೊಂಡರು, ಹೊಳಿಗೆ ಸಮೇತ ವಿವಿಧ ಸಿಹಿ ಪದಾರ್ಥಗಳನ್ನು ನದಿಗೆ ಅರ್ಪಿಸಿದರು, ಕಲಾತಂಡದವರಿಂದ ಭರತನಾಟ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು


