ಬಾಲಿವುಡ್‌ನ 2,500 ಸ್ಕ್ರೀನ್‌ಗಳಲ್ಲಿ ಹಿಂದಿಯ ಕಾಂತಾರ ರಿಲೀಸ್

ಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ “ಕಾಂತಾರ” (Kantara) ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು  ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ (Rishabh Shetty) ಅವರಿಗೆ ನಿಜಕ್ಕೂ ಅಭಿನಂದನೆ ಸಲ್ಲಬೇಕು.

ಸ್ಯಾಂಡಲ್‌ವುಡ್‌ನಲ್ಲಿ ಈಗ ಎಲ್ಲಿ ನೋಡಿದರೂ “ಕಾಂತಾರ”ದ್ದೇ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕೂಡ. ಇಂತಹ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ (Hindi) ಭಾಷೆಯಲ್ಲೂ “ಕಾಂತಾರ” ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ “ಕಾಂತಾರ” ಪ್ರದರ್ಶನವಾಗಲಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ “ಕೆ.ಜಿ.ಎಫ್ 2” ಬಾಲಿವುಡ್ (Bollywood) ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿದ್ದು ಗಮನಾರ್ಹ. ಈಗ “ಕಾಂತಾರ” ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ (Vijay Kirgandur) ವಿಜಯ್ ಕಿರಗಂದೂರು.

Recent Articles

spot_img

Related Stories

Share via
Copy link