ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ (Tippu Express) ರೈಲಿನ ಹೆಸರು ಬದಲಾವಣೆ ಬೆನ್ನಲ್ಲೇ ವಿರೋಧ ಪಕ್ಷ ನಾಯಕರಿಂದ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಖಡಕ್ ಉತ್ತರ ನೀಡಿದ್ದಾರೆ. ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಜರು ಮೈಸೂರಿಗೆ (Mysuru Wadiyar Dynasty) ಕೊಟ್ಟ ನೂರು ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪು (Tippu Sultan) ಬೆಂಬಲಿಸುವವರು ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನು ಹೇಳಲಿ ಸಾಕು ಎಂದು ಸವಾಲು ಹಾಕಿದ್ದಾರೆ.
ಟಿಪ್ಪುಗೂ ಮೈಸೂರಿಗೂ (Mysuru) ಏನು ಸಂಬಂಧ? ಟಿಪ್ಪು ಏನು ಮೈಸೂರಿನವನಾ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಟಿಪ್ಪು ಕೊಡುಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಯಾರೂ ಮಾಡದ ಸಾಧನೆ ಮಾಡಿದ್ದೇನೆ: ಈವರೆಗೆ ಒಂದು ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಿದ ಉದಾಹರಣೆಯೇ ಇಲ್ಲ. ಆದ್ರೆ ಇದನ್ನು ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ. ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ (Siddaramaiah) ನಾವು ಪಾಠ ಕಲಿಯುವ ಅಗತ್ಯ ಇಲ್ಲ. ಟಿಪ್ಪು ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಅನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ. ನಾನು ಮೈಸೂರಿಗೆ 10 ಟ್ರೈನ್ (Train) ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
