ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ! ವಾಹನ ಸವಾರರೇ ಎಚ್ಚರ.

ಕಾಂಗ್ರೆಸ್ ಪಕ್ಷ ತಾನು ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಪಂಚ ಗ್ಯಾರಂಟಿಗಳನ್ನು ಘೋಷಿಸಿ ಆ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಈಗ 15 ದಿನಗಳಾಗಿವೆ.

ಅಷ್ಟೂ ಭರವಸೆಗಳನ್ನು ಈಡೇರಿಸಬೇಕಾದರೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ರಾಜ್ಯ ಸರಕಾರಕ್ಕೆ ಅನಿವಾರ್ಯವಾಗಲಿದೆ. ಅದನ್ನು ಹೇಗೆ ಹೊಂದಿಸಿಕೊಳ್ಳುವುದು ಎನ್ನುವುದು ಈಗ ನೂತನ ಕಾಂಗ್ರೆಸ್ ಸರಕಾರದ ಮುಂದಿರುವ ದೊಡ್ಡ ಸವಾಲು.

ಅದಕ್ಕಾಗಿ ರಾಜ್ಯದ ಎಲ್ಲಾ‌ ಆದಾಯ ಮೂಲಗಳನ್ನು ಹುಡುಕಾಡುತ್ತಿರುವ ನೂತನ ಸರಕಾರಕ್ಕೆ ಈಗ ದಂಡ ವಸೂಲಾತಿಯ ಮೇಲೆ ಕಣ್ಣು ಬಿದ್ದಿದೆ.

ವಾಹನ ಸವಾರರು ಉಲ್ಲಂಘಿಸುವ ನಿಯಮಗಳನ್ನು ಆಧರಿಸಿ ಪ್ರತಿ ಪೊಲೀಸ್ ಠಾಣೆಗೆ ಕನಿಷ್ಟ 300 ಪ್ರಕರಣಗಳನ್ನು ದಿನಕ್ಕೆ ದಾಖಲಿಸಲು ಮೇಲಿನಿಂದ ಸೂಚನೆ ಬಂದಿದೆ ಎಂಬ ಸುದ್ದಿಯನ್ನು ರಾಜ್ಯದ ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಇನ್ನು ಮುಂದೆ ನೋ ಪಾರ್ಕಿಂಗ್, ಹೆಲ್ಮೆಟ್ ಇಲ್ಲದೆ ಸವಾರಿ, ತ್ರಿಬಲ್ ರೈಡ್, ಒನ್ ವೇ ಹೀಗೆ ನಿಯಮ ಉಲ್ಲಂಘನೆಗೆ ಯಾವುದೇ ಮುಲಾಜಿಲ್ಲದೇ ದಂಡ ಬೀಳಲಿದೆ.

ಇದನ್ನು ವಾಹನ ಸವಾರರು ಗಂಭೀರವಾಗಿ ಪರಿಗಣಿಸಿ ನಿಯಮ ಪಾಲಿಸಿದರೆ ಕ್ಷೇಮ. ಇಲ್ಲದೇ ಹೋದರೆ ಜೇಬಿಗೆ ಕತ್ತರಿ ಗ್ಯಾರಂಟಿ.

Recent Articles

spot_img

Related Stories

Share via
Copy link