ದಾವಣಗೆರೆ ಜಿಲ್ಲೆಯ ನಾಗರಕಟ್ಟೆಯ ಗಾನ ಕೋಗಿಲೆ ಹನುಮಂತನಾಯ್ಕ ರವರಿಗೆ ಒಲಿದ ” ಕರುನಾಡ ಕೋಗಿಲೆ ಪ್ರಶಸ್ತಿ.

ದಾವಣಗೆರೆ 07 : ಕಳೆದ ಸುಮಾರು 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ಗೀತೆ ವೈಯುಕ್ತಿಕ ಹಾಗೂ ಜಾನಪದ ಗೀತೆ ಸಮೂಹ ಗಾಯನದಲ್ಲಿ ಪ್ರಥಮ ಬಹುಮಾನಗಳು ಪಡೆದಿರವ ನಾಗರಕಟ್ಟೆ ಗ್ರಾಮೀಣ ಗಾಯನ ಅಂಗವಿಕಲ ಪ್ರತಿಭೆ ಹನುಮಂತ್ ನಾಯ್ಕ್ರಿಗೆ ಕರುನಾಡ ಕೋಗಿಲೆ ಪ್ರಶಸ್ತಿ ಲಭಿಸಿದೆ.
ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಜೊತೆಗೆ ಹಲವಾರು ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಬಹುಮಾನ ಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ಊರು ದುಗ್ಗಮ್ಮ ಪೇಟೆ ದಾವಣಗೆರೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
3 ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಇವರು ಅಂಗವಿಕಲರ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಪ್ರಬಂಧ ಜಾನಪದ ಗೀತೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಹುಟ್ಟಿದ 14 ತಿಂಗಳ ನಂತರ ಪೋಲಿಯೋದಿಂದ ವಿಕಲ
ಚೇತನನಾದೆ ಎನ್ನುವ ಇವರು ತಂದೆ ಚಂದ್ರನಾಯ್ಕ ಅವರೇ ನನ್ನ ಬಾಳಿನ ಬೆಳಕು ನನಗೆ ಗುರು ಸ್ಫೂತಿ೯ದಾಯಕರು ಎನ್ನುವ ಹನುಮಂತ್ ನಾಯ್ಕ್ ಇವರ ತಾಯಿ ಪುಟ್ಟಿಬಾಯಿ. ಇವರ ಪತ್ನಿ ಪವಿತ್ರ ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು
ಸ್ವಗ್ರಾಮ ನಾಗರಕಟ್ಟೆಯಲ್ಲಿ
ಪದವಿ ಪೂರ್ವ ಶಿಕ್ಷಣವನ್ನು ದಾವಣಗೆರೆಯ ಸರ್ಕಾರಿ ಮೋತಿ ವೀರಪ್ಪ ಕಾಲೇಜಿನಲ್ಲಿ ಮುಗಿಸಿದರು.
ಡಿ ಎಡ್ ವೃತ್ತಿ ತರಬೇತಿಯನ್ನು ತುಮಕೂರಿನ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕನಹಳ್ಳಿಯಲ್ಲಿ ಪೂರೈಸಿ ದೂರ ಶಿಕ್ಷಣ ಪದವಿಯನ್ನು
ಧಾರವಾಡದಿಂದ ಬಿ ಎ, ಇಗ್ನೋ ಬಿ, ಎಡ್ ಪದವಿಯನ್ನು ಉಡುಪಿಯಲ್ಲಿ, ಎಂ.ಎ ಪದವಿಯನ್ನು ಮೈಸೂರು ಯೂನಿವರ್ಸಿಟಿಯಿಂದ ಪಡೆದಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ನನಗೆ ಪಾಠ ಮಾಡುವ ವಿಶೇಷ ಚೇತನ ಶಿಕ್ಷಕರು ಸಿದ್ದಪ್ಪ ಅವರು ಮಾದರಿಯಾಗಿ ಅಂದಿನಿಂದಲೇ ಶಿಕ್ಷಕರಾಗಬೇಕೆಂಬ ಕನಸು ಕಂಡವರು. 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತಾವು ಬಯಸಿದ ಶಿಕ್ಷಕ ಹುದ್ದೆ ಪಡೆದುಕೊಂಡರು.

ಬಾಲ್ಯದಿಂದಲೇ ಇವರ ತಂದೆ ಹಾಡುತಿದ್ದ ಕೋಲಾಟ, ಲಾವಣಿ, ಭಜನೆ ಪದಗಳಿಂದ ಪ್ರೇರೇಪಿತರಾಗಿ ಸಂಗೀತವನ್ನು ನೆಚ್ಚಿನ ಹವ್ಯಾಸವಾಗಿ ಮೈಗೂಡಿಸಿಕೊಂಡರು. 4ನೇ ತರಗತಿಯಿಂದ ಆರಂಭಗೊಂಡು ಈವರೆಗೂ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.
ಗಾನ ಕೋಗಿಲೆ, ಕಲಾ ವಿಭೂಷಣ ಶಿಕ್ಷಣ ಸೌರಭ ಪ್ರಶಸ್ತಿ ಸಂದಿವೆ. ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿ ಎರಡರಲ್ಲೂ ಹಾಡುವುದು. ವಿಶೇಷ.
ರಜೆ ಹಾಗೂ ಬಿಡುವಿನ ಅವಧಿಯಲ್ಲಿ ಉಚಿತ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ತಮ್ಮಲ್ಲಿನ ಕಲೆಯನ್ನು ಮಕ್ಕಳಿಗೆ ಧಾರೆಯೆರೆಯುತ್ತಿದ್ದಾರೆ. ಕರೋನ ಸಂದರ್ಭ ಇವರು ಅಂಗವಿಕಲರ ತ್ರಿಚಕ್ರ ವಾಹನದಲ್ಲಿ ಮನೆಯವರ ಸಹಾಯದಿಂದ ಆಹಾರ ಪೊಟ್ಟಣವನ್ನು ನಗರಗಳಲ್ಲಿ ಹಂಚಿ ಸಾಮಾಜಿಕ ಕಾಳಜಿ ತೋರಿದ್ದಾರೆ. ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ ಅಧ್ಯಕ್ಷರು ಮಧುನಾಯ್ಕ್ ಲಂಬಾಣಿ ಆಯೋಜಿಸಿದ ಆನ್ ಲೈನ್ ವೈವಿಧ್ಯ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾಗಿ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ ರಾಜ್ಯ ಮಟ್ಟದ ಕರುನಾಡ ಕೋಗಿಲೆ ಪ್ರಶಸ್ತಿಯನ್ನು ಕಳೆದ ಜುಲೈ 28ರಂದು ಪಡೆದ ಇವರು ಹತ್ತನೇ ವಯಸ್ಸಿನಿಂದಲೇ ಜಾನಪದ, ಭಾವಗೀತೆ, ಚಿತ್ರಗೀತೆ, ಲಾವಣಿ, ಕೋಲಾಟ ಪದಗಳನ್ನು ಹಾಡುತ್ತಾ ಕಲಾ ಸಂಗೀತ ಸರಸ್ವತಿ ದೇವಿಯ ಆರಾಧನೆ ಮಾಡುತ್ತಾ ಹಾಡುತ್ತಾ, ನನ್ನ ವಿದ್ಯಾರ್ಥಿಗಳಿಗೂ ಕಲಿಸುತ್ತಾ ಬಂದಿದ್ದೇನೆ ಪ್ರಸ್ತುತ ನನ್ನ ಶಾಲೆಯ ಎರಡನೇ ತರಗತಿ ಮಕ್ಕಳು ನಾಡಗೀತೆಯನ್ನು ಕರೋಕೆ ಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ “ನಾನು ವಿಕಲ ಚೇತನ ಎಂದು ಮನಸ್ಸಿಗೆ ನೋವಾದರೆ ಆಗ ಒಂದೇರಡು ಹಾಡುಗಳನ್ನು ಹಾಡಿ ನಿವೇದಿಸಿಕೊಳ್ಳುತ್ತೇನೆ ಇದರಿಂದ ನನ್ನ ಮನಸು, ಹೃದಯ ಹರ್ಷಗೊಂಡು ನನ್ನ ನೋವು ಮರೆಸುತ್ತದೆ” ಸಂಗೀತವೇ ನನ್ನುಸಿರು ಭಾವ ಪರವಾಶ ತೋರುವ
ಇಂತಹ ವಿಶೇಷ ಚೇತನ ಪ್ರತಿಭೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಇನ್ನೂ ಇವರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ,ಅವಕಾಶಗಳು,ಕೀರ್ತಿ ದೊರೆಯಲಿ ಎಂದು ನಾಗರಕಟ್ಟೆ ತಾಂಡದ ಎಲ್ಲಾ ಗುರು ಹಿರಿಯರು,ಬಂಧುಗಳು ಸ್ನೇಹಿತರು. ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.

ವರದಿ : ಮಧುಬಾಬು H ಹರಪನಹಳ್ಳಿ
ವಿಜಯನಗರ ಜಿಲ್ಲೆ

Recent Articles

spot_img

Related Stories

Share via
Copy link