ಜಮಖಂಡಿ ನಗರದ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಸ್ಟರಗೆ ಸುಣ್ಣ ಬಳಿದಿರುವದನ್ನು ಅಂಬೇಡ್ಕರ್ ಸೇನೆಯಿಂದ ತೀವ್ರವಾಗಿ ಖಂಡಿಸಿ. ಪ್ರತಿಭಟನೆಯನ್ನು ನಡೆಸಲು ಮುಂದಾದ ಘಟನೆ ನಡೆದಿದೆ.
2023 ನೇ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಜಮಖಂಡಿ ಸರಕಾರಿ ಉಪವಿಭಾಗ ಆಸ್ಪತ್ರೆಯ ಗೋಡೆಗಳಿಗೆ ಅಂಟಿಸಿರುವ ಪೋಸ್ಟರಗಳನ್ನು ತೆರವುಗೊಳಿಸುವ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಸ್ಟರಗೆ ಸುಣ್ಣವನ್ನು ಬಳಿದಿದ್ದಾರೆ.
ಅದನ್ನು ಖಂಡಿಸಿ ಪ್ರತಿಭಟನೆ ಮಾಡಲು ಅಂಬೇಡ್ಕರ್ ಸೇನೆಯವರು ಮುಂದಾದ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ. ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.
ಡಾ.ಬಿ.ಅರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಬೇಕೆಯನ್ನು ಉದ್ದೇಶ ನಮ್ಮದು ಇಲ್ಲ. ನಮ್ಮ ಸಿಬ್ಬಂದಿ ತಪ್ಪು ಮಾಡಿದ್ದಾರೆ. ಅವರ ಪರವಾಗಿ ಕ್ಷೇಮೆಯಾಚಿಸಿದರು.
ಅಂಬೇಡ್ಕರ್ ಸೇನೆಯ ಜಿಲ್ಲಾಧ್ತಕ್ಷ ಸುರಜ ಕುಡ್ರಾಣಿ. ಬಸು ಕುರಣಿ.ರುದ್ರಾ ಬಳೋಲಗಿಡದ. ಜಗದೀಶ ಪೂಜಾರಿ. ವಿಠ್ಠಲ ಕಡಕೋಳ. ರುತು ಶಿಂದೆ.ಲಕ್ಷ್ಮಣ ಕುರಣಿ ಸೇರಿದಂತೆ
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನೇಕರು ಇದ್ದರು.
ವರದಿ – ಅಗಸ್ತ್ಯ ಟೈಮ್ಸ್.

