ಜಮಖಂಡಿ ೨೮ : ಕೃಷ್ಣಾ ನದಿಯಲ್ಲಿ ನೇರೆಹಾವಳಿ ನಿಯಂತ್ರಿಸುವಲ್ಲಿ ಗ್ರಾಮ, ತಾಲೂಕಾ, ಜಿಲ್ಲಾಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.
ತಾಲೂಕಿನ ಮುತ್ತೂರ ಗ್ರಾಮದ ಕೃಷ್ಣಾ ನದಿಯಲ್ಲಿನ ನೀರಿನ ಮಟ್ಟ ವಿಕ್ಷಿಸಿ ಅವರು ಸುದ್ದಿಗಾರರ ಜೋತೆ ಮಾತನಾಡಿದರು.
ಪ್ರವಾಹ ಪರಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಅಗತ್ಯ ಬಿದ್ದರೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು, ಜಾನುವಾರುಗಳಿಗೆ ಮೇವು ನೀಡಲಾಗುವುದು ಪ್ರವಾಹ ಎದುರಿಸುವÀದಕ್ಕೆ ಯಾವುದೆ ಅನುದಾನ ಕೊರತೆ ಇಲ್ಲ ಎಂದರು.
ನದಿ ತಿರದಲ್ಲಿನ ಜನರು ನಾವು ಎಷ್ಟೆ ಹೇಳಿದರು ಸುರಕ್ಷಿತ ಸ್ಥಳಕ್ಕೆ ಬರುವದಿಲ್ಲ ಅವರಿಗೆ ಅಪಾಯ ಮಟ್ಟ ಎನಿಸದರೆ ಮಾತ್ರ ಹೊರಬರುತ್ತಾರೆ, ನಾವು ಅವರನ್ನು ಸುರಕ್ಷಿತ ಸ್ಥಳಕ್ಕೆ ತರುವ ಕಾರ್ಯ ಮಾಡಿದರೆ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ತರುತ್ತಾರೆ ಎನ್ನುತ್ತಾರೆ ಎಂದರು.
ಮಹಾರಾಷ್ಟç ಅಧಿಕಾರಿಗಳ ಜೋತೆ ಸಮನ್ವಯ ಸಾಧಿಸುತಿದ್ದೆವೆ, ಮುಂಜಾಗೃತ ಕ್ರಮ ಜರುಗಿಸಲಾಗಿದೆ ಎಂದರು.
ಮುತ್ತೂರ ನಡುಗಡ್ಡೆಯಲ್ಲಿ ಎಷ್ಟು ಕುಟುಂಭಗಳು, ಜಾನುವಾರುಗಳಿವೆ ಎಂಬುದರ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಹಾಲು ಮಾರುವದಕ್ಕೆ ಬೋಟ್ ಕೋಡ್ರಿ:
ಮುತ್ತೂರ ನಡುಗಡ್ಡೆಯಲ್ಲಿ ಸುಮಾರು ೨೫೦ ಎಕರೆ ಪ್ರದೇಶದಲ್ಲಿ ಪ್ರತಿನಿತ್ಯ ಸಾವಿರಾರು ಲಿಟರ್ ಹಾಲು ಉತ್ಪಾದನೆಯಾಗುತ್ತವೆ ಅದನ್ನು ಮಾರಾಟ ಮಾಡಲು ನದಿಯನ್ನು ದಾಟಿಯೆ ಬರುವಂತ ಸ್ಥಿತಿ ಇದೆ, ನಮಗೆ ನಡುಗಡ್ಡೆಗೆ ಹೋಗಿ ಬರಲು ಬೋಟ್ ನೀಡಿದರೆ ತುಂಬಾ ಅನಕೂಲವಾಗುತ್ತದೆ ಎಂದು ನಡುಗಡ್ಡೆಯ ನಿವಾಸಿಗಳು ಮನವಿ ಮಾಡಿಕೊಂqರು.
ಸುಮಾರು ೩ ಲಕ್ಷ ಕ್ಯೂಸೆಕ್ಸ್ ನಷ್ಟು ನೀರು ಹರಿದು ಬಂದರೆ ಮಾತ್ರ ನಡುಗಡ್ಡೆ ಮುಳುಗಡೆಯಾಗುತ್ತದೆ ಅಲ್ಲಿಯವರೆಗೆ ತೊಂದರೆ ಉಂಟಾಗುವುದಿಲ್ಲ ಎಂದು ಗ್ರಾಮದ ಪ್ರಮುಖರು ತಿಳಿಸಿದರು.
ನಮ್ಮ ತೊಟಗಳು ನೀರಿನ ಮಧ್ಯೆ ಇವೆ, ಆಲಮಟ್ಟಿ ೫೧೯ಮೀಗೆ ಮುಳುಗಡೆಯಾಗುವುದಿಲ್ಲ, ೫೨೪ ಮೀ ನೀರು ನಿಂತರೆ ಮಾತ್ರ ಸಂಪೂರ್ಣ ಮುಳುಗಡೆಯಾಗುತ್ತದೆ ನಾವು ಪ್ರತಿವರ್ಷ ಆತಂಕದಲ್ಲೆ ಕಾಲ ಕಳೆಯಬೇಕಾಗಿದೆ, ಶಾಸ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ನಮಗೆ ಅಭಯ ಹಸ್ತ ನೀಡಬೇಕು ಎಂದು ಗ್ರಾಮಸ್ಥರು ಸುದ್ದಿಗಾರರ ಮುಂದೆ ತಮ್ಮ ಅಸಹಾಯಕತೆ ತೊಡಿಕೊಂಡರು.
ಪ್ರವಾಹ ಮಟ್ಟದಲ್ಲಿ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿರುವ ನೀರಿನ ಮಟ್ಟ ವಿಕ್ಷಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಮುತ್ತೂರ ಗ್ರಾಮಕ್ಕೆ ಭೆಟ್ಟಿ ನೀಡಿದ್ದ ವೇಳೆ ರಸ್ತೆ ಪಕ್ಕ ಜಮಿನೊಂದರಲ್ಲಿ ಬೆಳೆದಿದ್ದ ನುಗ್ಗೆ ಕಾಯಿಯನ್ನು ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ಹರಿಸಿ ತೆಗೆದುಕೊಂಡು ಹೊಗಲು ವಾಹನ ಸಾಲುಗಟ್ಟಿ ನಿಲ್ಲಿಸಿದ ಪ್ರಸಂಗ ನಡೆಯಿತು.
ಮಹಾರಾಷ್ಟçದಲ್ಲಿ ಮಳೆಯಾದ್ರೆ ನನಗೇನು ಗೊತ್ತು:
ಮಹಾರಾಷ್ಟçದಲ್ಲಿ ಮಳೆ ಪ್ರಮಾಣ ನೀರಿನ ಪರಸ್ಥಿತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಜಿಲ್ಲಾಧಿಕಾರಿ ಮಹಾರಾಷ್ಟçದಲ್ಲಿ ಮಳೆಯಾದರೆ ನನಗೆನು ಗೊತ್ತು ಹಾರೈಕೆ ಉತ್ತರ ನೀಡಿ, ಮಹಾರಷ್ಟçದಲ್ಲಿನ ಮಳೆ ಬಗ್ಗೆ ಬೇಡಪ್ಪ ನಮ್ಮೂರಿಂದು ಹೇಳೊಣ, ನಮ್ಮೂರಲ್ಲಿ ನೆನ್ನೆಯಿಂದ ಮಳೆ ಸ್ವಲ್ಪ ಬಿಡುವು ಕೊಟೈತೆ ಎಂದರು.
ಈ ಸಂದರ್ಬದಲ್ಲಿ ಎಸಿ ಸಂತೋಷ ಕಾಮಗೌಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ ಇತರರು ಇದ್ದರು.
ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಕೃಷ್ಣಾ ನದಿಯಲ್ಲಿನ ನೀರಿನ ಮಟ್ಟವನ್ನು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ವಿಕ್ಷಿಸಿದರು.
ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಪ್ರವಾಹ ಮಟ್ಟದ ನದಿ ವಿಕ್ಷಿಸಲು ಆಗಮಿಸಿದ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ನುಗ್ಗೆ ಕಾಯಿ ಹರಿಸಿ ಒಯ್ಯೂತ್ತಿರುವುದು.



