ಬೆಳಗಾವಿ: ಯಾವುದೇ ಜಾತಿ ಮತ ಪಂಥಗಳಿಂದ ಸ್ವಾಮೀಜಿಗಳಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ಬಸವರಾಜ ಬೊಮ್ಮಾಯಿ (Basavarj Bommai) ಸರ್ಕಾರ (Government) ಪುಣ್ಯಕ್ಕೆ ಮತಾಂತರ (Conversion) ನಿಷೇಧ ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು ಎಂದು ಕೊಲ್ಲಾಪುರದ ಕನ್ನೇರಿಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ (Kadasiddeshwar Sri) ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಲ್ಲಾಪುರದ ಕನ್ಹೇರಿಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶವಾಗಿದೆ. ಐನೂರಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ. ಮತ್ತಷ್ಟು ಮಠಾಧೀಶರು ಬರುತ್ತಿದ್ದಾರೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣ ಆಗಿದ್ದು, ನಾವು ಮಠಗಳ ಮಾಲೀಕರು ಅಲ್ಲ. ವ್ಯವಸ್ಥಾಪಕರು. ಸಂಸ್ಕಾರ ಕೊಡುವ ಕೆಲಸ ಸ್ವಾಮೀಜಿಗಳು ಮಾಡಬೇಕು. ಗುರುಗಳು ಮತ್ತು ಭಕ್ತರ ಅಂತರ ಕಡಿಮೆ ಆಗಬೇಕು. ಗುರುಗಳು ಭಕ್ತರ ಸಮೀಪ ಹೋಗಬೇಕು ಎಂದರು.
