ಕನ್ನಡ ಸಾಹಿತ್ಯ ಪರಿಷತ್ತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಪರೂಪದವರು ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಸಾಧಕರತ್ನ ಪ್ರಶಸ್ತಿ ಸಮಾರಂಭ

ಜಮಖಂಡಿ 04 : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕಾ ಘಟಕ ‌ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ನಮನ ಟ್ರಸ್ಟ್ ಬೆಂಗಳೂರು. ಸಾಹಿತ್ಯ ಸೌರಭ ವೇದಿಕೆ ಮತ್ತು ವೀರೇಶ್ವರ ಪ್ರಕಾಶನ ಜಮಖಂಡಿ ಸಹಯೋಗದಲ್ಲಿ ಅಪರೂಪದ ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಸಾಧಕರತ್ನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಎಪ್ರಿಲ್ 6 ರಂದು ನಡೆಯಲಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಸಂಗಮೇಶ ಮಟ್ಟೋಳಿ ಹೇಳಿದರು.

ಜಮಖಂಡಿ ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಪ್ರಿಲ್ 6 ರಂದು ಬೆಳಗ್ಗೆ 9 ಗಂಟೆಗೆ ಎ.ಜಿ.ದೇಸಾಯಿ ಸರ್ಕಲದಿಂದ ಅಶೋಕ ಸರ್ಕಲವರಗೆ ವಿವಿಧ ವಾಧ್ಯಗಳ ಕರಡಿ ಮಜಲದೊಂದಿಗೆ ಅಪರೂಪದ ಕೃತಿ ಮರೆವಣಿಗೆ ನಢಯುವದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ ಸಂತೋಷ ತಳಕೇರಿ ಹಾಗೂ ಡಾ.ಟಿ.ಪಿ.ಗಿರಡ್ಡಿ ಅವರು ಮಾತನಾಡಿ. 38 ಸಾಧರಕನ್ನು ಗುರುತಿಸಿ ಅಪರೂಪದ ಕೃತಿಯನ್ನು ಡಾ.ಸಂಗಮೇಶ ಮಟ್ಟೋಳಿ ಅವರು ರಚಿಸಿದ್ದಾರೆ. ಸುಮಾರು ,8 ಗ್ರಂಥಗಳನ್ನು ರಚಿಸಿದ್ದಾರೆ. ಗ್ರಾಮೀಣ ಕುಸ್ತಿಪಟು ಹಾಗೂ ರಾಜ್ಯಮಟ್ಟದ ಕುಸ್ತಿಪಟುಗಳ ಬಗ್ಗೆ ಗ್ರಂಥ ರಚಿಸಿ ಹೀಗೆ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಸಂಗಮೇಶ ಮಟ್ಟೋಳಿ. ಡಾ.ಟಿ.ಪಿ.ಗಿರಡ್ಡಿ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಂತೋಷ ತಳಕೇರಿ. ಡಾ.ಲಿಂಗಾನಂದ ಗವಿಮಠ. ಬಸವರಾಜ ಗಿರಗಾಂವಿ ಸುದ್ದಿಗೋಷ್ಠಿಯಲ್ಲಿ ಇದ್ದರು.

AGASTYA TIMES

Recent Articles

spot_img

Related Stories

Share via
Copy link