JAMAKHANDI 24 : ನಮ್ಮ ಪಂಚ ಜ್ಞಾನೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖವಾದುದು ದೃಷ್ಟಿ.ಈ ಸೂಕ್ಷ್ಮ ಅಂಗದ ತೊಂದರೆಗಳಿಗೆ ದೃಷ್ಟಿ ಮಾಂದ್ಯತೆಯ ಕಾರಣಗಳಿಗೆ ಈಗ ನವೀನ ತಂತ್ರಜ್ಞಾನಗಳಿಂದ ಹಾಗೂ ನೇತ್ರ ಚಿಕಿತ್ಸೆ ಹೊಸ ಆವಿಷ್ಕಾರಗಳಿಂದ ಚಿಕಿತ್ಸೆ ಸಾಧ್ಯವಿದ್ದು ನೇತ್ರ ರೋಗಿಗಳಿಗೆ ಹೊಸ ಆಶಾದೀಪವಾಗಿ ಹೊಮ್ಮುತ್ತಿದೆ ಈ ರೀತಿ ದಿನದಿನವೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುತ್ತಾ ಚಿಕಿತ್ಸಾ ವಿಧಾನದಲ್ಲಿ ಮಾನವೀಯತೆ ಅಂಶವನ್ನು ಕೈ ಬಿಡದೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ಹುಬ್ಬಳ್ಳಿಯ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಎಂದು ಡಾ. ದೀಪ ಎಸ್ ಮುಗಳಿ ತಿಳಿಸಿದರು.
ನಗರದ ಎಂಎಂ ಜೋಷಿ ನೇತ್ರ ವಿಜ್ಞಾನ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕದ ಜನತೆಗೆ ಕಳೆದ ನಾಲ್ಕು ದಶಕಗಳಿಂದ ನೇತ್ರ ಚಿಕಿಸ್ತಾರಂಗದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ ನವೀನ ಯಂತ್ರೋಪಕರಣಗಳಿಂದ ಸುಸಜ್ಜಿತವಾದ ಹಾಗೂ ಪರಿಮಿತ ಸಿಬ್ಬಂದಿ ಬಂದಿರುವ ಈ ಆಸ್ಪತ್ರೆ, ನೇತ್ರ ಚಿಕಿತ್ಸೆಯ ಹೊಸ ಆವಿಷ್ಕಾರಗಳನ್ನು ಹಾಗೂ ತಂತ್ರಜ್ಞಾನಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುತ್ತಾ ವೃತ್ತಿಪರತೆ ಹಾಗೂ ಮಾನವೀಯ ದೃಷ್ಟಿಕೋನವನ್ನು ಹೊಂದಿದೆ ಎಂದರು.
ಬ್ಲೇಡ್ ಲೆಸ್ ಕ್ಲಾಸಿಕ್ ಲೇಸರ್ ಚಿಕಿತ್ಸೆ ಕನ್ನಡಕ ಇಲ್ಲದೆ ಉತ್ತಮ ದೃಷ್ಟಿ ,ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯಲ್ಲಿ ಅತ್ಯಂತ ನವೀನ ವಿಧಾನವಾದ ಕೋಲ್ಡ್ ಫೇಕೋ ವಿಧಾನ(ಹೊಲಿಗೆ ಹಾಕದೆ ಪೊರೆಯ ಆಪರೇಷನ್) ,ಅಕ್ಷಿಪಟಲದ ಶಸ್ತ್ರ ಚಿಕಿತ್ಸೆ, ಮೆಲ್ಲಗಣ್ಣಿನ ಶಸ್ತ್ರಚಿಕಿತ್ಸೆ ,ಕಾಚಬಿಂದು ಶಸ್ತ್ರಚಿಕಿತ್ಸೆ , ಕಾರ್ನಿಯಾದ ಕಸಿ ಶಸ್ತ್ರಚಿಕಿತ್ಸೆ,ಲೇಸರ್ ಕಿರಣದ ಸಹಾಯದಿಂದ ಅಕ್ಷಿಪಟಲದ ಹಲವಾರು ತೊಂದರೆಗಳಿಗೆ ಚಿಕಿತ್ಸೆ, ಸಕ್ಕರೆ ಕಾಯಿಲೆಯಿಂದ ಉಂಟಾಗುವ ಡಯಾಬಿಟಿಕ್ ರೆಟಿನೋಪಥಿಗೆ ಪಾಸ್ಕಲ್ ಹಾಗೂ ಡಯೋಡ್ ಲೇಸರ್ ಚಿಕಿತ್ಸೆ ,ಕಂಟ್ರಾಕ್ಟ್ ಲೆನ್ಸ್ ಕ್ಲಿನಿಕ್ ಹೀಗೆ ವಿವಿಧ ರೀತಿಯ ಆಧುನಿಕ ತಂತ್ರಜ್ಞಾನಗಳುಳ್ಳ ಮಷೀನ್ ಗಳು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಿದೆ ಎಂದು ತಿಳಿಸಿದರು.
ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಯ ಜನರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ.ಕೆಎಸ್ಆರ್ಟಿಸಿ, ಪೊಲೀಸ್ ಸ್ಟೇಷನ್,ನಿವೃತ್ತ ಸರ್ಕಾರಿ ನೌಕರರ ಸಂಘ,ಹೀಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಉಚಿತ ಕಣ್ಣಿನ ತಪಾಸನ ಶಿಬಿರವನ್ನು ಹಮ್ಮಿಕೊಂಡು ಸಾರ್ವಜನಿಕರ ಸೇವೆಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ನೇತ್ರದಾನ ಜಾಗೃತಿ ಶಿಬಿರಗಳನ್ನು ಕೂಡ ಹಮ್ಮಿಕೊಂಡು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕಣ್ಣಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಬಂದ ಸಾಮಾನ್ಯ ಜನರಿಗೆ ಸರಿಯಾಗಿ ಮಾಹಿತಿಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಬಡತನ ಹೊಂದಿದ ಸಾಮಾನ್ಯ ಜನರು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.ಪ್ರತಿಯೊಬ್ಬ ಮನುಷ್ಯರು ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ತಪಾಸಣೆ ಮಾಡಿಕೊಳ್ಳಬೇಕು.ಕನ್ನು ಶರೀರಕ್ಕೆ ಕನ್ನಡಿ ಇದ್ದ ಹಾಗೆ.ಕಲ್ಲು ತಪಾಸಣೆ ಮಾಡುವ ವೇಳೆಯಲ್ಲಿ ದೇಹದ ರೋಗಗಳನ್ನು ಕಂಡುಹಿಡಿಯಬಹುದು. ಕಣ್ಣಿಗೆ ಮುಂಜಾಗ್ರತ ಕ್ರಮಗಳೆಂದರೆ ಮೊಬೈಲ್ ಅನ್ನು ನೋಡುವುದನ್ನ ಕಡಿಮೆ ಮಾಡಬೇಕು. 20 / 20/ 20 ಈ ವಿಧಾನವನ್ನು ಬಳಸಿ ನೋಡಬೇಕು.ಊಟದಲ್ಲಿ ಎಣ್ಣೆ ಪದಾರ್ಥವನ್ನು ಕಡಿಮೆ ಮಾಡಬೇಕು.ಕೆಂಪು ಹಳದಿ ಹಸಿರು ಬಣ್ಣದ ಹಣ್ಣು/ತರಕಾರಿಗಳನ್ನು ತಿನ್ನಬೇಕು.ಪ್ರಸ್ತುತವಾಗಿ ಸಣ್ಣ ಮಕ್ಕಳಿಗೆ ಚಸ್ಮಾ ಬರುವುದನ್ನು ನಾವು ಗಮನಿಸುತ್ತಿದ್ದೇವೆ. ಆದಕಾರಣ ಅದನ್ನು ತಡೆಯುವುದಕ್ಕಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಅನ್ನು ಕೊಡುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.




