ಅನಂತ್ ಕುಮಾರ್ ಹೆಗಡೆ : ಇವತ್ತಿನ ಸ್ಥಿತಿಗೆ ನಿಜಕ್ಕೂ ನನಗೆ ಖೇದವಿದೆ.

ಇವತ್ತಿನ ಸ್ಥಿತಿಗೆ ನಿಜಕ್ಕೂ ನನಗೆ ಖೇದವಿದೆ.
ಆದರೆ ನಮಗೆ ಸ್ಪಸ್ಟ ವಾಗಿ ಗೊತ್ತಿತ್ತು, ಈ ನಾಯಕರನ್ನು ಮುಂದಿಟ್ಟುಕೊಂಡು ಹೋದಲ್ಲಿ 80 ಸೀಟು ದಾಟುವುದಿಲ್ಲ ಎಂದು ಆರು ತಿಂಗಳ ಹಿಂದೆಯೇ ಹೇಳಿದ್ದೇನೆ.
ಇವತ್ತಿನ ಫಲಿತಾಂಶ ನೋಡಿದರೆ 65 ಕ್ಕೆ ಬಂದು ನಿಂತಿದೆ ಅಂದ್ರೆ ಜನ ಯಾವ ಮಟ್ಟದಲ್ಲಿ ತಿರಸ್ಕರಿಸ ಬಹುದು ಅಂತ ಯೋಚಿಸಿ.
ಜನ ಪ್ರಜ್ಞಾವಂತರಿದ್ದಾರೆ. ಮೋದಿ ಹೆಸರು ಹೇಳ್ಕೊಂಡೇ ಗೆಲ್ಲಬಹುದೆಂದು ರಾಜ್ಯದ BJP ವಿದೂಷಕ ಕಂಪೆನಿ ತಿಳಿದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ನೋಡಿ ಮತ್ತೆ BJP ಗೆ 22ಕ್ಕಿಂತ ಹೆಚ್ಚು ಸ್ಥಾನ ಬರುತ್ತದೆ. , ಸಂದೇಹ ಬೇಡ.
ರಾಜ್ಯದಲ್ಲಿ ಆಡಳಿತ BJP ಯದ್ದೇ ಇದ್ದಾಗ ಚುನಾವಣಾ ಸಂದರ್ಭದಲ್ಲಿ ಎದರು ಪಕ್ಷದ ಅಭ್ಯರ್ಥಿಗಳ ಮೇಲೆ IT ರೈಡ್ ಮಾಡಿಸುವುದು ಇತ್ಯಾದಿ ಮತ್ತಸ್ಟು ನೆಗೆಟಿವ್ ಉಂಟು ಮಾಡುತ್ತವೆ.ಯಾಕೆ ಅಂದರೆ ಇವರ ಸಚಿವರ ಸಾಲು ಸಾಲು ಲಂಚಾವತಾರಗಳು ಚುನಾವಣಾ ದಿನಾಂಕ ಘೋಷಣೆ ಆಗಿ ಚುನಾವಣೆಗೆ ಒಂದು ತಿಂಗಳು ಇದೆ ಅನ್ನುವವರೆಗೂ ಕೇಳಿ ಬಂದಿತ್ತು, ಸಾಕ್ಷಿ ಪುರಾವೆ ಸಹಿತ ( ಮಾಡಾಳು ಕಥೆ) ಈ ತರದ ಇವರ ಬ್ರಸ್ಟಾಚಾರ ಕಣ್ಣೆದುರೇ ರಾಚುತ್ತಿರುವಾಗ ನೀವು ಅಧಿಕಾರದಲ್ಲಿ ಇಲ್ಲದವರ ಮೇಲೆ IT ರೈಡ್ ಮಾಡಿಸುವುದನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡಂತೇ ಆಗುತ್ತದೆ. ಹೇಳುವುದು ಹಿಂದುತ್ವ, ನೈಜವಾಗಿ ಹಿಂದೂ ಕಾರ್ಯಕರ್ತರ ಅವಗಣನೆ .( ಪುತ್ತೂರಿನ ಲ್ಲಿ) ಹೀಗೆ ಅನೇಕ ಸ್ವಯಂ ಕ್ರತಾಪರಾಧದಿಂದ ಇಂದು BJP ಕೈಯಲ್ಲಿ ಇದ್ದ ಅಧಿಕಾರವನ್ನು ತನ್ನದೇ ಮೂರ್ಖತನದಿಂದ ಕಳೆದುಕೊಂಡಿದೆ ಎನ್ನಬಹುದು.
ಅದು ಬೇರಾವುದೇ ಅಧಿಕಾರ ವಿರೋಧಿ ಅಲೆ, ಇತ್ಯಾದಿ ಎನೂ ಅಲ್ಲ. ಒಳ್ಳೆಯ ಕೆಲಸ, ಜನಸ್ನೆಹಿ ರಾಜಕಾರಣ ಮಾಡಿದ್ರೆ ಜನರಿಗೆ ನಿಮ್ಮ ಮೇಲೆ ಭರವಸೆ / ನಂಬಿಕೆ ಬಂದ್ರೆ ಜನ ಮತ್ತೊಮ್ಮೆ ಆರಿಸಿಕಳಿಸುತ್ತಾರೆ. ಉದಾಹರಣೆಗೆ ದಿವಂಗತ ರಾಮಕೃಷ್ಣ ಹೆಗಡೆಯವರು ಸತತ ಮೂರು ಬಾರಿ ಜನತಾದಳ ವನ್ನು ಅಧಿಕಾರ ಕ್ಕೆ ತಂದಿದ್ದಾರೆ.
ಕಾಂಗ್ರೆಸ್ ಯಾವ ವಿಚಾರ/ ವಿಷಯ ಯಾವ ರೀತಿಯಲ್ಲಿ ಹೇಳಬೇಕೆಂದು ಗೊತ್ತಿಲ್ಲದೇ ಒಂದೊಂದು ಅಸಂಬದ್ದ ಹೇಳಿಕೆ ಕೊಟ್ಟರೂ ಜನ BJP ಯನ್ನು ಈ ಸಲ ನಂಬಲು ಸಿದ್ದರಿಲ್ಲ. ಭಜರಂಗದಳ ಬ್ಯಾನ್, ಮುಸ್ಲಿಂ ಮೀಸಲಾತಿ, ಗೋಮಾಂಸ ನಿಷೇಧ ಖಾಯಿದೆ ರದ್ದು ಮಾಡುತ್ತೇವೆ ಇತ್ಯಾದಿ ಅನೇಕ ಬಹುಸಂಖ್ಯಾತ ಜನವಿರೋಧಿ ಹೇಳಿಕೆ ಕೊಟ್ಟರೂ ಇಂದು ಕಾಂಗ್ರೆಸ್ 136 ಸ್ಥಾನ ಗೆದ್ದಿರುವುದು ನೋಡಿದರೆ ಜನ ಯಾವಪರಿಯಲ್ಲಿ ಇವರಿಂದ ರೋಸಿ ಹೋಗಿದ್ದಾರೆಂದು ಊಹಿಸಿ. ಮೊದಲು ಕಾಂಗ್ರೆಸ್ ಅಧಿಕಾರ ದಲ್ಲಿ ಇದ್ದಾಗಲೂ ಹಿಂದುಗಳು/ ಹಿಂದುತ್ವ ಹೀಗೇ ಇತ್ತು. BJP ಬಂದ ನಂತರ ಜನರನ್ನು ಎತ್ತಿ ಕಟ್ಟಿದ್ದು ಬಿಟ್ಟರೆ, ಕಂದಕವನ್ನು ಹೆಚ್ಚು ಮಾಡಲು ಪ್ರಯತ್ನ ಮಾಡಿದ್ದು ಬಿಟ್ಟರೆ ಹಿಂದೂಗಳಿಗೇನು ಮಾಡಿದೆ ?
ಅದರ ಮೇಲೆ ವಿಪರೀತವಾದ ಲಿಂಗಾಯತ ಓಲೈಕೆ. ಮಂತ್ರಿ ಮಂಡಲ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಇವರ ಜಾತಿವಾರು ಲೆಕ್ಕಾಚಾರ. ಅದೇ ಕಾಂಗ್ರೆಸ್ ಲಿಂಗಾಯತ ಆಗಲಿ ಒಕ್ಕಲಿಗ ಆಗಲಿ ಯಾವುದೇ ಒಂದು ನಿರ್ದಿಷ್ಟ ಗುಂಪನ್ನು ಮುಂದಿಟ್ಟುಕೊಂಡು ವಿಪರೀತ ಓಲೈಕೆಗೆ ಹೋಗಿಲ್ಲ.ಅದುವೇ ಇಂದು ಅವರನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ನೀಡಿದೆ.

Recent Articles

spot_img

Related Stories

Share via
Copy link