ಸ್ಥಳೀಯ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ
ಜಮಖಂಡಿ 27 : ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯಕ್ಕೆ ಗುರುವಾರ ಶಾಸಕ ಜಗದೀಶ ಗುಡಗುಂಟಿ ಧಿಡೀರ ಭೇಟಿ ನೀಡುವ ಮೂಲಕ ವ್ಯವಸ್ಥೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು ತಾಲೂಕಿನ ಮಕ್ಕಳಿಗೆ ವಸತಿ ನಿಲಯಕ್ಕೆ ಅವಕಾಶ ನೀಡದೆ ಬೇರೆ ತಾಲೂಕು, ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದರು. ಅರ್ಜಿ ಹಾಕಿದ ನಮ್ಮ ಮಕ್ಕಳ ಭವಿಷ್ಯ ಹೇಗೆ? ಸೂಕ್ತ ಕ್ರಮ ಕೈಗೊಂಡು ಸರಿಯಾದ ವ್ಯವಸ್ಥೆ ಕಲ್ಪಿಸಿ ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ತಾಲೂಕಿನಲ್ಲಿ ಕನಿಷ್ಠ 2ಸಾವಿರ ವಸತಿನಿಲಯ ಅವಶ್ಯಕವಾಗಿದ್ದು, ಪ್ರಸ್ತ್ತುತ ಬೇರೆ ಜಿಲ್ಲೆ ಸಹಿತ 900 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದಾರೆ. ಉಳಿದ ವಿದ್ಯಾರ್ಥಿಗಳ ಗತಿಯೇನು? ಕೂಡಲೇ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳ ಪ್ರವೇಶ ತಡೆಯುವ ಮೂಲಕ ವಸತಿನಿಲಯ ಕಟ್ಟಡಗಳ ನಿರ್ಮಾಣಕ್ಕೆ ಪತ್ರ ಬರೆಯಬೇಕೆಂದು ಖಡಕ್ಕಾಗಿ ಸೂಚಿಸಿದರು.
ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಸಾಕಷ್ಟು ಅರ್ಜಿ ಸಲಿಸಿದ್ದು. ಆದರೆ ಜಮಖಂಡಿ ತಾಲ್ಲೂಕಿನ ಮಕ್ಕಳಿಗೆ ವಸತಿ ನಿಲಯಕ್ಕೆ ಅವಕಾಶ ನೀಡದೆ. ಬೇರೆ ಜಿಲ್ಲೆ ಹಾಗೂ ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕಾಲಾವಕಾಶವನ್ನು ಯಾಕೆ ನೀಡಿದಿರಿ ಎಂದು ವಾರ್ಡನ
ಶಶಿಕಲಾ ಮಡಿವಾಳರ. ಹಿಂದುಳಿದ ವರ್ಗದ ವಸತಿ ನಿಲಯದ ಅಧಿಕಾರಿ ರಾಮಲಿಂಗ ಬೈರವಾಡಗಿ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಸಿ.ಎಸ್.ಗಡ್ಡದೇವರಮಠ. ಮ್ಯಾನೇಜರ್ ಶಿದ್ರಾಮ ಗೋಲಾಯಿ ಅವರನ್ನು ಪ್ರಶ್ನಿಸಿದರು.
ಜಮಖಂಡಿ ಮತಕ್ಷೇತ್ರದ ಮಕ್ಕಳು ಸರಕಾರಿ ಇಲಾಖೆಯಗಳ ವಸತಿ ನಿಲಯಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆ ಅವಕಾಶ ನೀಡಿಲ್ಲ. ಬಡ ಮಕ್ಕಳು ವಸತಿ ನಿಲಯವನ್ನು ಆಸರೆಯಾಗುತ್ತದೆಂದು ಅರಸಿ ಬಂದಿರುತ್ತಾರೆ. ಹೀಗಾದರೆ ಮಕ್ಕಳ ಭವಿಷ್ಯ ಏನು..? ಎಂದರು.
ಸರಿಯಾದ ವ್ಯವಸ್ಥೆ ಮಾಡದಿದ್ದರೆ ಒಳ್ಳೆಯದು ಇಲ್ಲದೆ ಹೋದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.
ಪ್ರತಿಯೊಂದು ಮಕ್ಕಳ ವಸತಿ ನಿಲಯಗಳಲ್ಲಿನ ಮಕ್ಕಳನ್ನು ವಿಚಾರಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ ಮಾತನಾಡಿ ಪ್ರಸಕ್ತ ವರ್ಷದಿಂದ ಆನ್ಲೈನ್ ವ್ಯವಸ್ಥೆ ಆರಂಭಗೊಂಡಿದ್ದು ಬೆಂಗಳೂರ ಮುಖ್ಯ ಇಲಾಖೆಯಿಂದ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬೇರೆ ಜಿಲ್ಲೆಗಳ ಮಕ್ಕಳು ವಸತಿ ನಿಲಯಕ್ಕೆ ಆಯ್ಕೆಗೊಂಡಿದ್ದಾರೆ. ಹೀಗಾಗಿ ಸ್ಥಳಿಯ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಬೇಟ್ಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯದ ಉಪಹಾರ, ಊಟ, ಅಡುಗೆಕೋಣೆ, ಸ್ನಾನಗ್ರಹ, ಶೌಚಾಲಯ, ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ, ಹಿಂದುಳಿದ ವರ್ಗದ ವಸತಿ ನಿಲಯ ಅಧಿಕಾರಿ ರಾಮಲಿಂಗ ಬೈರವಾಡಗಿ, ವ್ಯವಸ್ಥಾಪಕ ಶಿದ್ರಾಮ ಗೋಲಾಯಿ, ವಸತಿ ನಿಲಯ ಮೇಲ್ವಿಚಾರಕಿ ಶಶಿಕಲಾ ಮಡಿವಾಳರ, ನಾಗಪ್ಪ ಸನದಿ, ಅಜೇಯ ಕಡಪಟ್ಟಿ, ಶ್ರೀಧರ್ ಹಿರೇಮಠ ರಾಜು ಆಜೂರ್ ಗಣೇಶ ಶಿರಗನ್ನವರ, ಆದರ್ಶ ರೂಗಿಮಠ, ಶ್ರೀಧರ ಕಂಬಿ, ವಿಶ್ವಾಸ ಪಾಟೀಲ ಸಹಿತ ಹಲವರು ಇದ್ದರು.
